ಪಣಜಿ: ಗೋವಾ ರಾಜ್ಯದಲ್ಲಿ ಕೋವಿಡ್ ನಿಂದಾಗಿ ಮೃತಪಟ್ಟಿರುವ ಹಾಗೂ ಆರ್ಥಿಕ ದೃಷ್ಠಿಯಿಂದ ದುರ್ಬಲರಿರುವ ಕುಟುಂಬಕ್ಕೆ 2 ಲಕ್ಷ ರೂ ಆರ್ಥಿಕ ಸಹಾಯ, ಮೃತರಾದವರ ಮಕ್ಕಳಿಗೆ (ಪಿಯು ಹಾಗೂ ಮೇಲಿನದ್ದು) ಉಚಿತ ಲ್ಯಾಪಟಾಪ್, ಮುಖ್ಯಮಂತ್ರಿ ಅನಾಥ ಆಧಾರ ಯೋಜನೆಯನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಭಾನುವಾರ ಘೋಷಿಸಿದರು.
35 ನೇಯ ಗೋವಾ ರಾಜ್ಯತ್ವ ದಿನದ ಅಂಗವಾಗಿ ರಾಜ್ಯದ ಜನತೆಯನ್ನುದ್ದೇಶಿಸಿ ಮಾತನಾಡಿದ ಸಿಎಂ, ಗೋವಾ ಒಂದು ರಾಜ್ಯ ಎಂದು ಘೋಷಣೆಯಾಗುವ ಮುನ್ನ ದಮನ್ ಮತ್ತು ದೀವ್ ಎಂಬ ಹೆಸರಿತ್ತು. ಇದರಿಂದಾಗಿ ಹಲವು ಕಾಯ್ದೆಗಳು ಅದೇ ಹೆಸರಿ ನಲ್ಲೇ ಇದೆ. ಇದರಲ್ಲಿ ತಿದ್ಧುಪಡಿ ತಂದು ಗೋವಾ ದಮನ್ ಮತ್ತು ದೀವ್ ಇದ್ದುದನ್ನು ಕೇವಲ ಗೋವಾ ಎಂದಷ್ಟೇ ಇಡಲಾಗು ವುದು ಎಂದು ಮುಖ್ಯಮಂತ್ರಿ ಸಾವಂತ್ ಮಾಹಿತಿ ನೀಡಿದರು.
ರಾಜ್ಯದಲ್ಲಿ ಕರೋನಾದಿಂದಾಗಿ ಮೃತಪಟ್ಟ ಸದಸ್ಯರ ಕುಟುಂಬಗಳಿಗೆ ಆರ್ಥಿಕ ದೃಷ್ಠಿಯಿಂದ ಸರ್ಕಾರ 2 ಲಕ್ಷ ರೂ ನೀಡಲಿದೆ. ರಾಜ್ಯದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಎಲ್ಲರಿಗೂ ಶೀಘ್ರವೇ ಲಸಿಕಾ ಕಾರ್ಯ ಪೂರ್ಣಗೊಳಿಸಲಾಗುವುದು. 18 ರಿಂದ 45 ವರ್ಷದ ವರೆಗಿನ ಜನರಿಗೆ ಜೂನ್ 3 ರಿಂದ ಲಸಿಕಾ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಸಾವಂತ್ ಮಾಹಿತಿ ನೀಡಿದರು.