ಗೋವಾ : ಗೋವಾದ ಮಾಪೂಸ ನಗರವು ಬೀದಿ ಬದಿಯ ಗಾಡಿಗಳಲ್ಲಿ, ಮತ್ತು ಸಣ್ಣ ಮಳಿಗೆಗಳಲ್ಲಿ ಗೋಬಿ ಮಂಚೂರಿ ಮಾರಾಟ ಮಾಡುವುದನ್ನು ನಿರ್ಬಂಧಿಸಿ ನಿಷೇಧ ವಿಧಿಸಿದೆ.
ಗೋಬಿ ಮಂಚೂರಿ ಮಳಿಗೆಗಳಲ್ಲಿ ಸ್ವಚ್ಛತೆಯ ಕೊರತೆ ನಿಷೇಧಕ್ಕೆ ಕಾರಣವಾಗಿದೆ.
ಮಾಪುಸ ನಗರ ಪಾಲಿಕೆ ಗೋಬಿ ಮಂಚೂರಿಗೆ ನಿಷೇಧ ವಿಧಿಸುತ್ತಿರುವ ಮೊದಲ ನಗರವೇನಲ್ಲ. 2022 ರಲ್ಲಿ ವಾಸ್ಕೋ ನಗರ ಪಾಲಿಕೆಯೂ ಸಹ ಗೋಬಿ ಮಂಚೂರಿ ಮಾರಾಟಗಾರರ ವಿರುದ್ದ ಕ್ರಮಕ್ಕೆ ಮುಂದಾಗಿತ್ತು.
1970 ರಲ್ಲಿ ನೆಲ್ಸನ್ ವ್ಯಾಂಗ್ ಎಂಬಾತ ಗೋಬಿ ಮಂಚೂರಿಯನ್ನು ಅವಿಷ್ಕರಿಸಿದ್ದ. ಚಿಕನ್ ಮಂಚೂರಿಗೆ ಬದಲಾಗಿ ಹೂಕೋಸಿನ್ನು ಬಳಸಿ ಈತ ಮಾಡಿದ್ದ ಪ್ರಯೋಗ ಅದ್ಭುತ ಯಶಸ್ಸು ಕಂಡಿತ್ತು.