ಕೊಚ್ಚಿ: ಚಿನ್ನದ ಕಳ್ಳಸಾಗಣೆ ಕೇಸಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಪ್ರಮುಖ ಆರೋಪಿ ಎಂ.ಶಿವಶಂಕರ್’ರನ್ನು 7 ದಿನಗಳ ಕಾಲ ಕಸ್ಟಡಿಗೊಪ್ಪಿಸಲಾಗಿದೆ.
ಗುರುವಾರ ಬೆಳಗ್ಗೆ ಕೊಚ್ಚಿಯಲ್ಲಿರುವ ವಿಶೇಷ ನ್ಯಾಯಾಲಯದ ಮುಂದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಕೇಸಿನಡಿ ವಿಚಾರಣೆಗೆ ಹಾಜರುಪಡಿಸಲಾಗಿತ್ತು. ಅವರನ್ನು ಕೋವಿಡ್-19 ಪರೀಕ್ಷೆಗೊಳಪಡಿಸಲಾಯಿತು. ನೆಗೆಟಿವ್ ವರದಿ ಬಂದಿದ್ದು ನಂತರ ಜಾರಿ ನಿರ್ದೇಶನಾಲಯಕ್ಕೆ ಏಳು ದಿನಗಳ ಕಸ್ಟಡಿಗೊಪ್ಪಿಸಲಾಯಿತು.
ಕೇರಳ ಸರ್ಕಾರದ ಮಾಜಿ ಪ್ರಧಾನ ಕಾರ್ಯದರ್ಶಿ ಎಂ ಶಿವಶಂಕರ್ ಅಧಿಕಾರಾವಧಿಯಲ್ಲಿ ಸ್ವಪ್ನ ಸುರೇಶ್ ಅವರು ಚಿನ್ನ ಕಳ್ಳ ಸಾಗಣೆ ಮಾಡಿದ್ದು ಅದಕ್ಕೆ ಕಸ್ಟಮ್ಸ್ ಇಲಾಖೆಯನ್ನು ಸಂಪರ್ಕಿಸಿ ಸಾಗಿಸಲು ಶಿವಶಂಕರ್ ಸಹಾಯ ಮಾಡಿದ್ದರು ಎಂಬ ಆರೋಪವಿದೆ. ಚಿನ್ನವನ್ನು ಕಳೆದ ಜುಲೈ 5ರಂದು ಈ ರೀತಿ ಅಕ್ರಮವಾಗಿ ಸಾಗಣೆ ಮಾಡುವಾಗ ವಶಪಡಿಸಿಕೊಳ್ಳಲಾಗಿತ್ತು.