Friday, 1st November 2024

Gold Country: ಅತಿ ಹೆಚ್ಚು ಚಿನ್ನ ಹೊಂದಿದ ದೇಶಗಳಲ್ಲಿ ಅಮೆರಿಕ ನಂ.1; ಭಾರತಕ್ಕೆ ಎಷ್ಟನೇ ಸ್ಥಾನ?

Gold Country

ದಿನೇದಿನೇ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ರಾಷ್ಟ್ರದ ಆರ್ಥಿಕ ಸ್ಥಿರತೆಯನ್ನು ಖಾತ್ರಿಪಡಿಸುವಲ್ಲಿ ಚಿನ್ನದ ನಿಕ್ಷೇಪಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದಾಗ ಚಿನ್ನ ಈ ಸಂಕಷ್ಟದಿಂದ ಪಾರು ಮಾಡುತ್ತದೆ. ಹಾಗಾಗಿ  ಯಾವುದೇ ರಾಷ್ಟ್ರ ಇದನ್ನು ಅತಿಮುಖ್ಯವಾದ ಆಸ್ತಿ ಎಂದೇ ಭಾವಿಸುತ್ತದೆ. ಹಾಗಾದ್ರೆ ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ದೇಶ(Gold Country) ಯಾವುದು? ಟಾಪ್ ಟೆನ್‍ನಲ್ಲಿ ಭಾರತ ಕೂಡ ಬರುತ್ತದೆಯೇ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಯುನೈಟೆಡ್ ಸ್ಟೇಟ್ಸ್(ಅಮೆರಿಕ)
ಅಮೆರಿಕ ಸರಿಸುಮಾರು 8,133.46 ಟನ್ ಚಿನ್ನದ ನಿಕ್ಷೇಪ ಹೊಂದಿರುವ ಮೂಲಕ  ವಿಶ್ವದ ಮೊದಲ ಸ್ಥಾನದಲ್ಲಿದೆ. ಇದರಲ್ಲಿ 72.41 ಪರ್ಸೆಂಟ್‌ನಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕಾಗಿ ಮೀಸಲಿರಿಸಿದೆ.

ಜರ್ಮನಿ
ಎರಡನೇ ಸ್ಥಾನದಲ್ಲಿರುವ ಜರ್ಮನಿ 3,351.53 ಟನ್ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಇದರಲ್ಲಿ 71.46% ನಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕಾಗಿ ಮೀಸಲಿರಿಸಿದೆ.

ಇಟಲಿ
2,451.84 ಟನ್ ಚಿನ್ನದ ನಿಕ್ಷೇಪದೊಂದಿಗೆ, ಇಟಲಿ ಜಾಗತಿಕವಾಗಿ ಮೂರನೇ ಸ್ಥಾನದಲ್ಲಿದೆ. ಇದು ವಿದೇಶಿ ವಿನಿಮಯಕ್ಕಾಗಿ  ಸುಮಾರು 68.33% ನಷ್ಟು ಚಿನ್ನವನ್ನು ಮೀಸಲಿಟ್ಟಿದೆ.

ಫ್ರಾನ್ಸ್
ಫ್ರಾನ್ಸ್ 2,436.97 ಟನ್ ಚಿನ್ನದ ನಿಕ್ಷೇಪದೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಇದು ಸರಿಸುಮಾರು 69.99% ರಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕೆ ಮೀಸಲಿಟ್ಟಿದೆ.

ರಷ್ಯಾ
ರಷ್ಯಾ ಒಕ್ಕೂಟವು 2,335.85 ಟನ್ ಚಿನ್ನದ ನಿಕ್ಷೇಪದೊಂದಿಗೆ ಐದನೇ ಸ್ಥಾನದಲ್ಲಿದೆ, ಇದು ಸುಮಾರು 29.47% ರಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕೆ ಮೀಸಲಿಟ್ಟಿದೆ.

ಚೀನಾ
ಆರನೇ ಸ್ಥಾನದಲ್ಲಿರುವ ಚೀನಾ 2,264.32 ಟನ್ ಚಿನ್ನದ ನಿಕ್ಷೇಪವನ್ನು ಹೊಂದಿದೆ. ಇದು ಅದರಲ್ಲಿ ಒಟ್ಟು ಸುಮಾರು 4.91% ರಷ್ಟು ಚಿನ್ನವನ್ನು  ವಿದೇಶಿ ವಿನಿಮಯಕ್ಕೆ ಮೀಸಲಿಟ್ಟಿದೆ.

ಭಾರತ
ಭಾರತವು 855 ಟನ್ ಚಿನ್ನದ ನಿಕ್ಷೇಪದೊಂದಿಗೆ ಏಳನೇ ಸ್ಥಾನದಲ್ಲಿದೆ. ಇದರಲ್ಲಿ ಅದರ ವಿದೇಶಿ ವಿನಿಮಯಕ್ಕಾಗಿ ಸರಿಸುಮಾರು 9% ರಷ್ಟು ಚಿನ್ನವನ್ನು ಮೀಸಲಿಟ್ಟಿದೆ.

ಜಪಾನ್
845.97 ಟನ್ ಚಿನ್ನದೊಂದಿಗೆ, ಜಪಾನ್ ಅತಿ ಹೆಚ್ಚು ಚಿನ್ನದ ನಿಕ್ಷೇಪವನ್ನು ಹೊಂದಿರುವ ದೇಶಗಳಲ್ಲಿ ಎಂಟನೇ ಸ್ಥಾನದಲ್ಲಿದೆ. ಇದು ಒಟ್ಟು ಸುಮಾರು 5% ರಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕೆ ಮೀಸಲಿಟ್ಟಿದೆ.

ನೆದರ್‌ಲ್ಯಾಂಡ್‌
ಅಂತಿಮವಾಗಿ, ನೆದರ್‌ಲ್ಯಾಂಡ್‌ 612.45 ಟನ್ ಚಿನ್ನದ ನಿಕ್ಷೇಪಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಅದರಲ್ಲಿ  ಒಟ್ಟು ಸುಮಾರು 61%ರಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕೆ ಮೀಸಲಿಟ್ಟಿದೆ.

ಇದನ್ನೂ ಓದಿ:ಸತ್ತವರ ಮೂಳೆಗಳಿಂದಲೇ ಸೂಪ್ ತಯಾರಿಸಿ ಕುಡಿಯುತ್ತಾರೆ! ಏನಿದು ವಿಚಿತ್ರ ಸಂಪ್ರದಾಯ?

ಟರ್ಕಿ
ಟರ್ಕಿ 584.93 ಟನ್ ಚಿನ್ನದ ನಿಕ್ಷೇಪದೊಂದಿಗೆ ವಿಶ್ವದ ಹತ್ತನೇ ಸ್ಥಾನದಲ್ಲಿದೆ. ಟರ್ಕಿಯ ಸೆಂಟ್ರಲ್ ಬ್ಯಾಂಕ್ ಜಾಗತಿಕವಾಗಿ ಕೇಂದ್ರ ಬ್ಯಾಂಕುಗಳಲ್ಲಿ ಚಿನ್ನದ ಅತಿದೊಡ್ಡ ಖರೀದಿದಾರರಲ್ಲಿ ಒಂದಾಗಿದೆ. ಟರ್ಕಿಯ ವಿದೇಶಿ ವಿನಿಮಯ ಮೀಸಲುಗಳಲ್ಲಿ ಸರಿಸುಮಾರು 34% ರಷ್ಟು ಚಿನ್ನವಿದೆ.