Sunday, 15th December 2024

ಚಿನ್ನದ ದರ 1088 ರೂ. ಏರಿಕೆ

ನವದೆಹಲಿ: ಚಿನ್ನದ ದರ ಒಂದೇ ದಿನ 1088 ರೂ. ಏರಿಕೆಯಾಗಿದೆ. 10 ಗ್ರಾಂ ಗೆ 1088 ರೂಪಾಯಿ ಏರಿಕೆಯಾಗಿದ್ದು, 51,458 ರೂಪಾಯಿಗೆ ತಲುಪಿದೆ.

ಬೆಳ್ಳಿಯ ದರ ಪ್ರತಿ ಕೆಜಿಗೆ 411 ರೂಪಾಯಿ ಕಡಿಮೆಯಾಗಿದ್ದು 58,159 ರೂ.ಗೆ ತಲುಪಿದೆ. ಚಿನ್ನದ ಆಮದು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಚಿನ್ನದ ಮೇಲಿನ ಆಮದು ಸುಂಕವನ್ನು ಶೇ. 10.75 ರಿಂದ ಶೇ. 15 ರಷ್ಟು ಹೆಚ್ಚಳ ಮಾಡಿದೆ.

ಮೂಲ ಕಸ್ಟಮ್ಸ್ ಸುಂಕ ಶೇಕಡ 7.5 ರಷ್ಟು ಇದ್ದು, ಅದು 12.5 ಕ್ಕೆ ಹೆಚ್ಚಾಗಿದೆ. ಶೇಕಡ 2.5ರಷ್ಟು ಕೃಷಿ ಮೂಲ ಸೌಕರ್ಯ ಅಭಿವೃದ್ಧಿ ಸೆಸ್ ಸೇರ್ಪಡೆಯಾಗುವುದರಿಂದ ಚಿನ್ನದ ಮೇಲಿನ ಒಟ್ಟು ಸಂಕ ಶೇ.15ರಷ್ಟು ಆಗಲಿದೆ. ಚಿನ್ನದ ಆಮದು ಪ್ರಮಾಣ ಭಾರಿ ಏರಿಕೆ ಕಂಡಿದ್ದು, ಕಳೆದ ಮೇನಲ್ಲಿ 107 ಟನ್ ಚಿನ್ನ ಆಮದು ಮಾಡಿಕೊಳ್ಳಲಾಗಿದೆ.