Friday, 13th December 2024

48 ಸಾವಿರ ರೂ. ಗಡಿ ದಾಟಿದ ಚಿನ್ನದ ದರ

ನವದೆಹಲಿ: ಭಾರತದ ಎಂಸಿಎಕ್ಸ್ ನಲ್ಲಿ ಮಂಗಳವಾರ ಪ್ರತಿ 10 ಗ್ರಾಮ್ ಗೆ 48,194 ರುಪಾಯಿಗೆ ವಹಿವಾಟು ಶುರು ಮಾಡಿದೆ.

ಈ ಹಿಂದಿನ ಎರಡು ಸೆಷನ್ ನಲ್ಲಿ ತೀಕ್ಷ್ಣ ನಷ್ಟ ಕಂಡಿದ್ದ ಸ್ಪಾಟ್ ಗೋಲ್ಡ್, ಪ್ರತಿ ಔನ್ಸ್ ಗೆ (28.3495 ಗ್ರಾಮ್) 0.4% ಏರಿಕೆ ಕಂಡು, $ 1784.37ರಲ್ಲಿ ವಹಿವಾಟು ನಡೆಸಿತು.

ಹೆಚ್ಚುತ್ತಿರುವ ಕೊರೊನಾ ಸೋಂಕು ಪ್ರಕರಣ ಹೆಚ್ಚುತ್ತಿರುವುದು ಹಾಗೂ ಯುಎಸ್ ನಲ್ಲಿನ ಇತರ ಆರ್ಥಿಕ ದೌರ್ಬಲ್ಯದ ಕಾರಣಕ್ಕೆ ಹೂಡಿಕೆದಾರರು ಚಿನ್ನಕ್ಕೆ ಆಕರ್ಷಿತರಾಗಿದ್ದರು. ಕಳೆದ ವಾರ ಯುಎಸ್ ನಲ್ಲಿ ಹನ್ನೊಂದು ಲಕ್ಷ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ.

ಮಂಗಳವಾರ ಫೆಡರಲ್ ರಿಸರ್ವ್ ಸಭೆಯ ಫಲಿತಾಂಶಕ್ಕಾಗಿ ಹೂಡಿಕೆದಾರರು ಈಗ ಎದುರು ನೋಡುತ್ತಿದ್ದಾರೆ. ಹಲವು ಅಂಶ ಗಳು ಸೇರಿ ಚಿನ್ನದ ಬೆಲೆಯಲ್ಲಿ ಏರಿಕೆ ಕಾಣಲು ಕಾರಣವಾಗಿದೆ. ಈ ಮಧ್ಯೆ ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಗಳಿಕೆ ಕಂಡಿದ್ದು, 73.95 ಇದೆ. ಶುಕ್ರವಾರದಂದು 74.05 ಇತ್ತು.