Thursday, 21st November 2024

ಎರಡು ದಿನಗಳಲ್ಲಿ ಚಿನ್ನದ ಬೆಲೆ ಸಾವಿರ ರೂಪಾಯಿ ಇಳಿಕೆ

ನವದೆಹಲಿ: ಭಾರತದಲ್ಲಿ ಎರಡು ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಬರೋಬ್ಬರಿ ಒಂದು ಸಾವಿರ ರೂಪಾಯಿ ಇಳಿಕೆಯಾಗಿದೆ. ಆದರೆ ಬೆಳ್ಳಿ ಬೆಲೆಯಲ್ಲಿ 700 ರೂಪಾಯಿ ಏರಿಕೆ ಯಾಗಿದೆ.

ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 46,250 ರೂಪಾಯಿ ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯ 50,450 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ದರದಲ್ಲೂ 700 ರೂಪಾಯಿ ಏರಿಕೆಯಾಗಿದ್ದು, 59,400 ರೂಪಾಯಿ ಆಗಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,250 ರೂ ಇದೆ, 24 ಕ್ಯಾರೆಟ್‌ನ 10 ಗ್ರಾಂ ಅಪರಂಜಿ ಚಿನ್ನಕ್ಕೆ 50,450 ರೂ ಇದೆ. ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,250 ರೂ ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,450 ರೂ. ಇದೆ. ಇನ್ನು ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 46,250 ರೂ. ಇದ್ದು, 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 50,450 ರೂ. ಇದೆ. ಚೆನ್ನೈನಲ್ಲಿ 47,370 ರೂ. ಹಾಗೂ ಅಪರಂಜಿ 10 ಗ್ರಾಂ ಚಿನ್ನದ ಬೆಲೆಯು 51,670 ರೂಪಾಯಿ ಆಗಿದೆ.