ತಿರುವನಂತಪುರಂ: ಕೊರೊನಾ ಸೋಂಕಿನಿಂದ ಬಚಾವಾಗಲು ಧರಿಸಲಾಗುವ ಎನ್-95 ಮಾಸ್ಕ್‌ನಲ್ಲಿ ಅಕ್ರಮವಾಗಿ ಚಿನ್ನವನ್ನು ಸಾಗಣೆ ಮಾಡುತ್ತಿದ್ದ ವಿಮಾನ ಪ್ರಯಾಣಿಕನನ್ನು ಬಂಧಿಸಿದ್ದಾರೆ.
ಘಟನೆಯು ಕೋಳಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಯುಎಇಯಿಂದ ವಾಪಸಾಗುತ್ತಿದ್ದ ಎಂದು ಹೇಳಲಾಗಿದ್ದು ಏರ್ ಇಂಟೆಲಿಜೆನ್ಸ್ ಯುನಿಟ್ ಬಂಧಿಸಿದೆ.
ಬಂಧಿತ ಕರ್ನಾಟಕದ ಭಟ್ಕಳದವನಾಗಿದ್ದು, ದುಬೈನಿಂದ ಕೇರಳಕ್ಕೆ ಬಂದಿದ್ದ. ಸುಮಾರು 2 ಲಕ್ಷ ಬೆಲೆ ಬಾಳುವ 40 ಗ್ರಾಂ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ. ಸೆಪ್ಟೆಂಬರ್ ಆರಂಭದಲ್ಲಿ ಸೌದಿ ಅರೇಬಿಯಾದಿಂದ ಕರಿಪುರಕ್ಕೆ ಬಂದ ಪ್ರಯಾಣಿಕ ರೊಬ್ಬರ ಬಳಿ 30 ಲಕ್ಷ ಬೆಲೆ ಬಾಳುವ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು, ಅದನ್ನು ಕುಕ್ಕರ್‌ನೊಳಗಿರಿಸಲಾಗಿತ್ತು.
ಒಂದೆರೆಡು ದಿನಗಳಲ್ಲಿ ಮತ್ತೆ 1 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿತ್ತು, ಮತ್ತೊಂದು ಘಟನೆಯಲ್ಲಿ 653 ಗ್ರಾಂ ಚಿನ್ನ ಹಾಗೂ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು.