ನವದೆಹಲಿ: 1912ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಟೈಟಾನಿಕ್ ಹಡಗು ಮುಳುಗಿದ್ದ ಸಂದರ್ಭದಲ್ಲಿ 700 ಕ್ಕೂ ಹೆಚ್ಚು ಪ್ರಯಾಣಿಕರನ್ನು ರಕ್ಷಿಸಿದ ಹಡಗಿನ ಕ್ಯಾಪ್ಟನ್ಗೆ ನೀಡಲಾದ ಚಿನ್ನದ ಪಾಕೆಟ್ ಗಡಿಯಾರವನ್ನು(Gold Watch) 1.96 ಮಿಲಿಯನ್ ಡಾಲರ್ಗೆ ಮಾರಾಟ ಮಾಡಲಾಗಿದೆ . ಇದು 1912 ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಸಮುದ್ರಯಾನದ ವೇಳೆ ದುರಾದೃಷ್ಟಕರವಾಗಿ ಮುಳುಗಿ ಸಾವನಪ್ಪಿದ ಒಬ್ಬ ಶ್ರೀಮಂತ ವ್ಯಕ್ತಿಯ ಪಾಕೆಟ್ ಗಡಿಯಾರವಾಗಿದೆ ಎಂದು ಹರಾಜುದಾರರಾದ ಹೆನ್ರಿ ಆಲ್ಡ್ರಿಡ್ಜ್ ಹೇಳಿದ್ದಾರೆ.
18 ಕ್ಯಾರೆಟ್ ಟಿಫಾನಿ & ಕೋ ಚಿನ್ನದ ಪಾಕೆಟ್ ಗಡಿಯಾರವನ್ನು ಟೈಟಾನಿಕ್ನ ಎ ಗ್ರೇಡ್ನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮಂತ ವ್ಯಕ್ತಿ ಜಾನ್ ಜಾಕೋಬ್ ಆಸ್ಟರ್ ಹೊಂದಿದ್ದರು. ದುರಾದೃಷ್ಟಕರ ಅವರು ಹಡಗು ಮುಳುಗಿ ಸಾವನಪ್ಪಿದ ಕಾರಣ ಅವರ ಪತ್ನಿ ಮೆಡೆಲೀನ್ ಆಸ್ಟರ್ ತಮ್ಮನ್ನು ರಕ್ಷಿಸಿದ ಕ್ಯಾಪ್ಟನ್ ಆರ್ಥರ್ ರೋಸ್ಟ್ರಾನ್ ಅವರಿಗೆ ನೀಡಿದ್ದಾರೆ. ಕ್ಯಾಪ್ಟನ್ ಆರ್ಥರ್ ರೋಸ್ಟ್ರಾನ್ ಟೈಟಾನಿಕ್ ಹಡಗಿನಿಂದ 705 ಪ್ರಯಾಣಿಕರನ್ನು ರಕ್ಷಿಸಿದ್ದಾರೆ.
ಹರಾಜುದಾರ ಆಂಡ್ರ್ಯೂ ಆಲ್ಡ್ರಿಡ್ಜ್ ಪ್ರಕಾರ, “ಆ ಜೀವಗಳನ್ನು ಉಳಿಸುವಲ್ಲಿ ರೋಸ್ಟ್ರಾನ್ ಅವರ ಧೈರ್ಯಕ್ಕೆ ಕೃತಜ್ಞತೆ ಸಲ್ಲಿಸಲು ಈ ಗಡಿಯಾರವನ್ನು ಉಡುಗೊರೆಯಾಗಿ ನೀಡಲಾಗಿದೆ” ಎಂದು ಹೇಳಿದ್ದಾರೆ. ವಿಶೇಷವೆಂದರೆ, ನ್ಯೂಯಾರ್ಕ್ನ ಕುಟುಂಬದ ಬಂಗಲೆಯಲ್ಲಿ ನಡೆದ ಊಟದ ಸಮಯದಲ್ಲಿ ಶ್ರೀ ರೋಸ್ಟ್ರಾನ್ ಅವರು ಶ್ರೀಮತಿ ಆಸ್ಟರ್ ಅವರಿಂದ ಈ ಗಡಿಯಾರವನ್ನು ಸ್ವೀಕರಿಸಿದ್ದಾರೆ. ಏಪ್ರಿಲ್ 15, 1912 ರಂದು ಟೈಟಾನಿಕ್ ಹಡಗಿನಲ್ಲಿ ಬದುಕುಳಿದ ಶ್ರೀಮತಿ ಜಾನ್ ಬಿ ಥಾಯರ್, ಜಾನ್ ಜಾಕೋಬ್ ಆಸ್ಟರ್ ಮತ್ತು ಜಾರ್ಜ್ ಡಿ ವೈಡ್ನರ್ ಅವರ ಕೃತಜ್ಞತೆ ಹಾಗೂ ಮೆಚ್ಚುಗೆಯೊಂದಿಗೆ ಕ್ಯಾಪ್ಟನ್ ರೋಸ್ಟ್ರಾನ್ಗೆ ವಾಚ್ ನೀಡಲಾಯಿತಂತೆ.
ಇದನ್ನೂ ಓದಿ:ಹೊಂಚು ಹಾಕಿ ಸಾಕು ನಾಯಿ ಮೇಲೆ ಚಿರತೆ ದಾಳಿ; ಈ ಶಾಕಿಂಗ್ ವಿಡಿಯೊ ಇಲ್ಲಿದೆ
ಈ ವರ್ಷದ ಏಪ್ರಿಲ್ನಲ್ಲಿ ಜಾನ್ ಜಾಕೋಬ್ ಆಸ್ಟರ್ ಅವರ ಮತ್ತೊಂದು ಚಿನ್ನದ ಪಾಕೆಟ್ ಗಡಿಯಾರ 1.46 ಮಿಲಿಯನ್ ಡಾಲರ್ಗೆ ಮಾರಾಟವಾಗಿದೆ. ಟೈಟಾನಿಕ್ ಹಡಗಿನಲ್ಲಿ ನುಡಿಸಲಾದ ಪಿಟೀಲು, 2013 ರಲ್ಲಿ $ 1.38 ಮಿಲಿಯನ್ಗೆ ಮಾರಾಟವಾಗಿದೆ.
1912 ರ ಏಪ್ರಿಲ್ 10 ರಂದು ನ್ಯೂಯಾರ್ಕ್ಗೆ ತನ್ನ ಮೊದಲ ಪ್ರಯಾಣ ಪ್ರಾರಂಭಿಸಿದ ಟೈಟಾನಿಕ್, 4 ದಿನಗಳ ಪ್ರಯಾಣದ ನಂತರ ಹಡಗು ಮಂಜುಗಡ್ಡೆಗೆ ಡಿಕ್ಕಿ ಹೊಡೆದು ಸಾವಿರಾರು ಪ್ರಯಾಣಿಕರ ಸಾವಿಗೆ ಕಾರಣವಾಯಿತು.1909 ರ ಮಾರ್ಚ್ 31ರಂದು ಟೈಟಾನಿಕ್ ಹಡಗಿನ ನಿರ್ಮಾಣ ಪ್ರಾರಂಭವಾಯಿತು. 1911 ರ ಮೇ 31 ರಂದು ನಿರ್ಮಾಣ ಪೂರ್ಣಗೊಂಡಿತು. ಹಡಗು ನಿರ್ಮಾಣ ಮಾಡುವ ಸಮಯದಲ್ಲಿಯೇ ಇಬ್ಬರು ಪ್ರಾಣ ಕಳೆದುಕೊಂಡರು. ಅಷ್ಟೇ ಅಲ್ಲ, 246 ಜನರು ಗಾಯಗೊಂಡರು. ಈ ಹಡಗು ತುಂಬಾ ಶಕ್ತಿಯುತವಾಗಿತ್ತು ಎನ್ನಲಾಗುತ್ತದೆ. ಎಷ್ಟೆಂದರೆ ಅದರ ಶಬ್ದವು ಸುಮಾರು 16 ಕಿಮೀ ವರೆಗೆ ಕೇಳುತ್ತಿತ್ತಂತೆ.