Sunday, 24th November 2024

ಚಿನ್ನದ ದರ 700 ರೂಪಾಯಿ ಕುಸಿತ

ನವದೆಹಲಿ: ಬಂಗಾರ ದರವು ಬರೋಬ್ಬರಿ 700 ರೂಪಾಯಿ ಕುಸಿತ ಕಂಡಿದೆ. ಒಂದು ದಿನ ಏರಿಕೆ, ಒಂದು ದಿನ ಇಳಿಕೆಯಾಗುತ್ತಿದೆ.

ಮೇ 30ರಂದು ಬಂಗಾರ ದರ ಇಳಿಕೆಯಾಗಿದ್ದು, ಮೇ 31ರಂದು ಚಿನ್ನದ ದರವು ಏರಿಕೆಯಾಗಿದೆ. ಜೂನ್ 1ರಂದು ಗೋಲ್ಡ್ ರೇಟ್ ಮತ್ತೆ ಇಳಿಕೆಯಾಗಿದೆ, ಅದಾದ ಮರುದಿನವೇ ಬೆಲೆ ಹೆಚ್ಚಳವಾಗಿದೆ. ಇಂದು ಮತ್ತೆ ಇಳಿಕೆಯಾಗಿದೆ.

ಜೂನ್ 3ರಂದು ಹತ್ತು ಗ್ರಾಂ 22 ಕ್ಯಾರೆಟ್‌ನ ಚಿನ್ನದ ದರವು 56,000 ರೂಪಾಯಿಯಿಂದ 55,300 ರೂಪಾಯಿಗೆ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ಬೆಲೆಯು 61,100 ರೂಪಾಯಿಯಿಂದ 60,330 ರೂಪಾಯಿಗೆ ಕುಗ್ಗಿದೆ. ಬೆಳ್ಳಿ ದರ ಇಂದು ಇಳಿಕೆಯಾಗಿದೆ.

ಭಾರತದಲ್ಲಿ ಚಿನ್ನದ ದರವು ಇಂದು ಇಳಿಕೆಯಾಗಿದೆ. ಕಳೆದ ಐದು ದಿನದಲ್ಲಿ 3 ಬಾರಿ ಗೋಲ್ಡ್ ರೇಟ್ ಕುಸಿದಿದ್ದು, 2 ಬಾರಿ ಏರಿಕೆಯಾಗಿದೆ.

ಇನ್ನು ಕಳೆದ ಹತ್ತು ದಿನದಲ್ಲಿ ಬಂಗಾರ ದರ 6 ಬಾರಿ ಇಳಿಕೆಯಾಗಿದ್ದರೆ 2 ಬಾರಿ ಏರಿಕೆಯಾಗಿದೆ. 2 ಬಾರಿ ಸ್ಥಿರವಾಗಿದೆ.