ದೆಹಲಿ: ಅಕ್ಟೋಬರ್ 10 ರಿಂದ ರೈಲು ಪ್ರಯಾಣದಲ್ಲಿ ಕೆಲವು ಬದಲಾವಣೆಗಳನ್ನು ರೈಲ್ವೆ ಇಲಾಖೆ ಘೋಷಣೆ ಮಾಡಿದೆ.
ಈ ಪ್ರಕಾರ ರೈಲು ನಿಲ್ದಾಣದಿಂದ ಹೊರಡುವ ಮುನ್ನ ಐದು ನಿಮಿಷದ ಮುಂಚೆ ಸೀಟುಗಳ ಲಭ್ಯತೆಯನ್ನು ಘೋಷಣೆ ಮಾಡ ಲಾಗುತ್ತದೆ. ಕೊರೊನಾ ಪೂರ್ವದ ನಿಮಯವನ್ನು ಮತ್ತೆ ಜಾರಿಗೆ ತರಲಾಗಿದೆ. ಅಲ್ಲದೇ ಸೆಕೆಂಡ್ ರಿಸರ್ವೆಶನ್ ಚಾರ್ಟ್ ನ್ನು ಅರ್ಧ ಗಂಟೆಗೆ ಮುಂಚಿತವಾಗಿ ಬಿಡಲಾಗುತ್ತದೆ. ಹೀಗಾಗಿ ರೈಲು ಹೊರಡುವ ಐದು ನಿಮಿಷಗಳ ಮುಂಚಿತವಾಗಿಯೇ ಆಸನ ಗಳನ್ನು ಬುಕ್ ಮಾಡಬಹುದಾಗಿದೆ.
ಕೊರೊನಾವೈರಸ್ ಹಿನ್ನೆಲೆಯಲ್ಲಿ ಇನ್ನೂ ಕೆಲ ದಿನ ರೈಲು ಸೇವೆ ಸಹಜ ಸ್ಥಿತಿಗೆ ಮರಳುವುದಿಲ್ಲ. ಆದರೆ ವಿಶೇಷ ರೈಲುಗಳು ಮಾತ್ರ ಕಾರ್ಯಾಚರಣೆ ನಡೆಸುತ್ತವೆ. ಇದರ ಜೊತೆ ಕೊರೊನಾ ಪೂರ್ವದ ನಿಯಮಗಳನ್ನು ರೈಲ್ವೆ ಇಲಾಖೆ ಜಾರಿಗೆ ತರುತ್ತಿದೆ.