Friday, 22nd November 2024

‘ಹರ್​ಘರ್​ ತಿರಂಗಾ ಅಭಿಯಾನ’ಕ್ಕೆ ಭಾರಿ ಸ್ಪಂದನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ‘ಹರ್​ಘರ್​ ತಿರಂಗಾ ಅಭಿಯಾನ’ಕ್ಕೆ ದೇಶಾದ್ಯಂತ ಭಾರಿ ಸ್ಪಂದನೆ ವ್ಯಕ್ತವಾಗಿದೆ.

ಮಂಗಳವಾರ 9 ಕೋಟಿ ಜನರು ತ್ರಿವರ್ಣ ಧ್ವಜದ ಜೊತೆಗೆ ಸೆಲ್ಫಿ ಇಳಿದು ವೆಬ್​ಸೈಟ್​ಗೆ ಅಪ್ಲೋಡ್​​ ಮಾಡಿದ್ದಾರೆ. ಸ್ವಾತಂತ್ರ್ಯೋ ತ್ಸವದ ಮೂರು ದಿನಗಳ ಮೊದಲು ಅಭಿಯಾನ ಆರಂಭಿಸಲಾಗಿತ್ತು.

ಮೂರು ದಿನಗಳ ಅಂತರದಲ್ಲಿ ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ವೆಬ್‌ಸೈಟ್‌ನಲ್ಲಿ ರಾಷ್ಟ್ರಧ್ವಜದೊಂದಿಗೆ ದೇಶದ 8,81,21,591 ಜನರು (88 ಮಿಲಿಯನ್) ಸೆಲ್ಫಿಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆಗಸ್ಟ್​ 13 ರಂದು ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಜನರು ಓಗೊಟ್ಟಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಸ್ವಾತಂತ್ರ್ಯ ದಿನಾಚರಣೆಯ ಬಳಿಕ ಮತ್ತಷ್ಟು ಜನರು ರಾಷ್ಟ್ರಧ್ವಜದೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳ ಲಿದ್ದಾರೆ.

ಹರ್ ಘರ್ ತಿರಂಗಾ ವೆಬ್‌ಸೈಟ್‌ನ ಮುಖಪುಟದಲ್ಲಿ ತ್ರಿವರ್ಣ ಧ್ವಜವಿದೆ. ಜನರು ಧ್ವಜದ ಜೊತೆಗೆ ಸೆಲ್ಫಿ ಅಪ್ಲೋಡ್​ ಮಾಡಲು ಎರಡು ಆಯ್ಕೆಗಳನ್ನು ನೀಡಲಾಗಿದೆ. 8.88 ಕೋಟಿ ಬಳಕೆದಾರರಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್, ನಟ ಅನುಪಮ್ ಖೇರ್ ಮತ್ತು ಗಾಯಕ ಕೈಲಾಶ್ ಖೇರ್ ಸೇರಿದಂತೆ ಭಾರತೀಯ ಧ್ವಜದೊಂದಿಗೆ ಕೇಂದ್ರ ಸಚಿವರು, ನಟರು ಮತ್ತು ಕ್ರೀಡಾಪಟುಗಳ ಫೋಟೋಗಳಿವೆ.

ಭಾರತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆಯಲ್ಲಿದೆ. ಆಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ಪ್ರಧಾನಿ ಮೋದಿ ಅವರು ಕಳೆದ ವರ್ಷ ಜುಲೈ 22 ರಂದು ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪ್ರಾರಂಭಿಸಿದ್ದರು.