ಹೊಸದಿಲ್ಲಿ: ಗೂಗಲ್ ಮ್ಯಾಪ್ (Google Maps) ಈಗ ಮೊಬೈಲ್ ನ್ಯಾವಿಗೇಷನ್‌ನಲ್ಲಿ ದಿನದಿಂದ ದಿನಕ್ಕೆ ಪ್ರಾಬಲ್ಯ ಸಾಧಿಸುತ್ತಿದೆ. ಇದು ಆಂಡ್ರಾಯ್ಡ್ ಮತ್ತು ಐಫೋನ್ ಬಳಕೆದಾರರ ಅತ್ಯುತ್ತಮ ಆಯ್ಕೆ ಎನಿಸಿಕೊಂಡಿದ್ದು, ಆಂಡ್ರಾಯ್ಡ್ ಆಟೋ ಮತ್ತು ಕಾರ್‌ಪ್ಲೇಯಲ್ಲಿಯೂ ನಂಬರ್ 1 ನ್ಯಾವಿಗೇಟರ್ ಆಗಿ ಬದಲಾಗಿದೆ. ಇದಕ್ಕೆ ಪರ್ಯಾಯವಾಗಿ ಆ್ಯಪಲ್‌ನ ಮ್ಯಾಪ್ (Apple Maps) ಇದ್ದರೂ ಗೂಗಲ್ ಮ್ಯಾಪ್‌ನ ಜನಪ್ರಿಯತೆ ಕಡಿಮೆಯಾಗಿಲ್ಲ.
ಗೂಗಲ್ ಮ್ಯಾಪ್ ವಿಶ್ವಾದ್ಯಂತ ಹೆಚ್ಚು ಬಳಸಲ್ಪಡುವ ನ್ಯಾವಿಗೇಷನ್ ಅಪ್ಲಿಕೇಶನ್ ಎನ್ನುವುದನ್ನು ಸಾಬೀತುಪಡಿಸುವ ಅಂಕಿ-ಅಂಶ ಬಹಿರಂಗಗೊಂಡಿದೆ.
ಬಳಕೆದಾರರ ಸಂಖ್ಯೆ
ಗೂಗಲ್ ಮ್ಯಾಪ್ ಅನ್ನು ಈಗ 2 ಬಿಲಿಯನ್ (2 ಶತಕೋಟಿ) ಬಳಕೆದಾರರನ್ನು ಬಳಸುತ್ತಿದ್ದಾರೆ. ಆ ಮೂಲಕ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಮತ್ತು ಯೂಟ್ಯೂಬ್ ಸೇರಿದಂತೆ ಕೆಲವೇ ಕೆಲವು ಉತ್ಪನ್ನಗಳು ತಲುಪಿದ ಮೈಲಿಗಲನ್ನು ಇದೂ ತಲುಪಿದೆ ಎಂದು ಮೂಲಗಳು ತಿಳಿಸಿವೆ. ಗೂಗಲ್ ಮ್ಯಾಪ್ 2 ಶತಕೋಟಿ ಮಾಸಿಕ ಬಳಕೆದಾರರನ್ನು ಹೊಂದಿದೆ. ಪ್ಲೇ ಸ್ಟೋರ್‌ನಲ್ಲಿ 10 ಶತಕೋಟಿ ಡೌನ್‌ಲೋಡ್ ದಾಖಲಿಸಿದೆ (ಪ್ರತಿ ಹೊಸ ಫೋನ್ ತಯಾರಿಸುವಾಗ ಅದರಲ್ಲಿ ಸ್ಟೋರ್ ಮಾಡಲಾಗುವ ಗೂಗಲ್ ಮ್ಯಾಪ್ ಅನ್ನೂ ಡೌನ್‌ಲೋಡ್ ಎಂದು ಪರಿಗಣಿಸಲಾಗುತ್ತದೆ).
ಪ್ರತಿಸ್ಪರ್ಧಿಗಳ ಅಂಕಿ-ಅಂಶ
ಗೂಗಲ್ ಮ್ಯಾಪ್ ವಿಶ್ವದ ಹೆಚ್ಚು ಬಳಸುವ ನ್ಯಾವಿಗೇಷನ್ ಅಪ್ಲಿಕೇಶನ್ ಆಗಿದ್ದು, ಇದರ ಪ್ರತಿಸ್ಪರ್ಧಿಗಳ ಅಂಕಿ-ಅಂಶ ಇಲ್ಲಿದೆ. ಗೂಗಲ್ ಮ್ಯಾಪ್‌ನ ಪ್ರಮುಖ ಪರ್ಯಾಯ ಎಂದರೆ ಅದು ವಾಜ್ (Waze). ಇದು ಕೂಡ ಗೂಗಲ್‌ನ ಉತ್ಪನ್ನವಾಗಿದ್ದು, ಇದನ್ನು ಸುಮಾರು 151 ಮಿಲಿಯನ್ (15 ಕೋಟಿ) ಸಕ್ರಿಯ ಬಳಕೆದಾರರನ್ನು ಹೊಂದಿದೆ. ಆ್ಯಪಲ್ ಮ್ಯಾಪ್ ಅಮೆರಿಕದಲ್ಲಿ ಬಹು ಜನಪ್ರಿಯವಾಗಿದೆ. ಅದಾಗ್ಯೂ ಇದರ ಬಳಕೆಯ ಅಂಕಿ-ಅಂಶ ಲಭ್ಯವಿಲ್ಲ. 2020ರಲ್ಲಿ ಮಾಹಿತಿ ಹಂಚಿಕೊಂಡ ಕಂಪೆನಿ ಈ ಅಪ್ಲಿಕೇಷನ್ ಅನ್ನು ಕನಿಷ್ಠ 200 ಮಿಲಿಯನ್ (20 ಕೋಟಿ) ಗ್ರಾಹಕರು ಬಳಸುತ್ತಿದ್ದಾರೆ ಎಂದು ತಿಳಿಸಿತ್ತು.
ಇದು ವಾಜ್‌ಗಿಂತ ಆ್ಯಪಲ್ ಮ್ಯಾಪ್‌ನ ಬಳಕೆದಾರರ ಸಂಖ್ಯೆ ಹೆಚ್ಚು ಎನ್ನುವುದನ್ನು ಸೂಚಿಸಿದೆ. ಅದಾಗ್ಯೂ ಕಳೆದ 12 ತಿಂಗಳಲ್ಲಿ ಶ್ರೇಯಾಂಕಗಳು ಬದಲಾಗಿರುವ ಸಾಧ್ಯತೆ ಇದೆ. ಈ ಅವಧಿಯಲ್ಲಿಆ್ಯಪಲ್ ಯಾವುದೇ ಅಪ್‌ಡೇಟ್ ವರ್ಷನ್ ಬಿಡುಗಡೆ ಮಾಡಿಲ್ಲ. ಇತ್ತ ಗೂಗಲ್ ಮ್ಯಾಪ್ ಅಪ್‌ಡೇಟ್ ಆಗಿದೆ. ಈ ಅಂದಾಜು ಅಂಕಿ-ಅಂಶಗಳ ಪ್ರಕಾರ ಗೂಗಲ್ ಮ್ಯಾಪ್ ವಿಶ್ವದ ನಂಬರ್ 1 ನ್ಯಾವಿಗೇಷನ್ ಅಪ್ಲಿಕೇಶನ್ ಆಗಿ ಹೊರ ಹೊಮ್ಮಿದರೆ ಆ್ಯಪಲ್ ಮ್ಯಾಪ್ಸ್ ಮತ್ತು ವೇಜ್ 2ನೇ ಸ್ಥಾನಕ್ಕಾಗಿ ಪ್ರಬಲ ಪೈಪೋಟಿ ನಡೆಸಿವೆ.
ಗೂಗಲ್ ಮ್ಯಾಪ್ಸ್ ಈ ವರ್ಷ ಹಲವು ಆಯ್ಕೆಗಳನ್ನು ಪರಿಚಯಿಸಿದೆ. ಕಾರ್‌ಪ್ಲೇಯಲ್ಲಿ ಸ್ಪೀಡೋಮೀಟರ್ ಅನ್ನು ಅಳವಡಿಸಿದೆ. ಬಳಕೆದಾರರು ಇತರ ವಾಹನ ಚಾಲಕರಿಗೆ ಎಚ್ಚರಿಕೆಗಳನ್ನು ನೀಡಲು ರಸ್ತೆಯಲ್ಲಿನ ಅಪಾಯಗಳನ್ನು ಫ್ಲ್ಯಾಗ್ ಮಾಡಬಹುದು. ಅಲ್ಲದೆ ಇತ್ತೀಚೆಗೆ ಗೂಗಲ್ ಮ್ಯಾಪ್‌ಗೆ ಎಐ ಅನ್ನು ಅಳವಡಿಸಲಾಗಿದೆ. ಈ ಮೂಲಕ ಕಿರಿದಾದ ರಸ್ತೆಗಳ ಮಾಹಿತಿ ಲಭಿಸಲಿದೆ.
ಈ ಸುದ್ದಿಯನ್ನೂ ಓದಿ: Guinness World Record: ಕುಂಬಳಕಾಯಿಯ ದೋಣಿಯಲ್ಲಿ ನದಿಯಲ್ಲಿ 73.5 ಕಿ.ಮೀ. ಪ್ರಯಾಣ