Saturday, 14th December 2024

ಕೃಷಿ ಮಸೂದೆ ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

ತಿರುವನಂತಪುರ: ಕೇಂದ್ರ ಸರ್ಕಾರ ಅಂಗೀಕರಿಸಿರುವ ಪರಿಷ್ಕೃತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಕ್ಕೆ ಆಗ್ರಹಿಸಿದ ನಿರ್ಣಯವನ್ನು ಕೇರಳ ವಿಧಾನಸಭೆ ಗುರುವಾರ ಒಮ್ಮತದಿಂದ ಅಂಗೀಕರಿಸಿದೆ. ಈ ಸಂಬಂಧವೇ ಕೇರಳ ಸರ್ಕಾರ ವಿಶೇಷ ವಿಧಾನಸಭೆ ಅಧಿವೇಶನ ನಡೆಸಿತ್ತು.

ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸಿ ಒಗ್ಗಟ್ಟು ಪ್ರದರ್ಶಿಸಿ ಕೇರಳದ ಎಡರಂಗ ಮತ್ತು ಐಕ್ಯರಂಗ ಸದಸ್ಯರು ವಿಧಾನಸಭೆಯಲ್ಲಿ ಒಮ್ಮತದ ನಿರ್ಣಯ ಅಂಗೀಕರಿಸಿದರು. ವಿಧಾನಸಭೆಯಲ್ಲಿರುವ ಏಕೈಕ ಬಿಜೆಪಿ ಸದಸ್ಯ ರಾಜಗೋಪಾಲ್ ಅವರು ಈ ನಿರ್ಣಯದಲ್ಲಿನ ಕೆಲವು ಅಂಶಗಳ ಬಗ್ಗೆ ವಿರೋಧ ವ್ಯಕ್ತಪಡಿಸಿದರೂ, ಅಂಗೀಕರಿಸುವುದಕ್ಕೆ ವಿರೋಧ ವ್ಯಕ್ತಪಡಿಸಲಿಲ್ಲ.

ಸದನದಲ್ಲಿ ಸಾಮಾನ್ಯ ಒಮ್ಮತ ಏರ್ಪಟ್ಟಿತ್ತು. ಹೀಗಾಗಿ ನಾನು ಅದನ್ನು ವಿರೋಧಿಸುವುದಕ್ಕೆ ಹೋಗಲಿಲ್ಲ ಎಂದು ಬಿಜೆಪಿ ಶಾಸಕ ಒ.ರಾಜಗೋಪಾಲ್ ಹೇಳಿದರು. ಸಂಸತ್ತಿನ ಸ್ಥಾಯೀ ಸಮಿತಿ ಪರಿಶೀಲನೆಗೆ ರವಾನಿಸದೆಯೇ ಕೃಷಿ ಕಾನೂನುಗಳನ್ನು ಅಂಗೀಕರಿಸ ಲಾಗಿದೆ. ಒಂದೊಮ್ಮೆ ರೈತರ ಪ್ರತಿಭಟನೆ ಮುಂದುವರಿದರೆ ಅದು ಗ್ರಾಹಕ ರಾಜ್ಯವಾಗಿರುವ ಕೇರಳವನ್ನು ತೀವ್ರವಾಗಿ ಬಾಧಿಸ ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.