Thursday, 21st November 2024

Government Employees: ಸರ್ಕಾರಿ ನೌಕರರಿಗೆ ಶುಭ ಸುದ್ದಿ; ಇಪಿಎಫ್, ಇಪಿಎಸ್ ಕೊಡುಗೆ ಮಿತಿ ಹೆಚ್ಚಳಕ್ಕೆ ಚಿಂತನೆ

EPF And EPS

ಸರ್ಕಾರಿ ನೌಕರರಿಗೆ ಶುಭ ಸುದ್ದಿ. 2025ಕ್ಕೂ ಮುನ್ನ ಕೇಂದ್ರ ಸರ್ಕಾರ ನೌಕರರಿಗೆ (Government Employees) ಭರ್ಜರಿ ಉಡುಗೊರೆ ಕೊಡಲು (EPF And EPS) ಹೊರಟಿದೆ. ಇಪಿಎಫ್ (Employees Provident Fund) ಮತ್ತು ಇಪಿಎಸ್ (Employee Pension Scheme) ಕೊಡುಗೆ ಮಿತಿಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದೆ.

ಸಂಘಟಿತ ವಲಯದಲ್ಲಿ ಕೆಲಸ ಮಾಡುವ ನೌಕರರ ಸಾಮಾಜಿಕ ಭದ್ರತೆಯನ್ನು ಬಲಪಡಿಸುವ ಸಲುವಾಗಿ ಕೇಂದ್ರ ಸರ್ಕಾರವು ನೌಕರರ ಭವಿಷ್ಯ ನಿಧಿ ಅಡಿಯಲ್ಲಿ ಕನಿಷ್ಠ ವೇತನದ ಮಿತಿಯನ್ನು (minimum wage limit) 15,000 ರೂ. ನಿಂದ 21,000 ರೂ. ಗೆ ಹೆಚ್ಚಿಸುವ ಸಾಧ್ಯತೆ ಇದೆ. ಇದರ ಹೊರತಾಗಿ ಇಪಿಎಫ್‌ಒಗೆ ಸೇರಲು ಯಾವುದೇ ಕಂಪೆನಿಯು ಉದ್ಯೋಗಿಗಳ ಸಂಖ್ಯೆ 20 ರಿಂದ 10- 15ಕ್ಕೆ ಇಳಿಸಬಹುದು. ಇದರಿಂದ ಹೆಚ್ಚು ಹೆಚ್ಚು ಕಂಪನಿಗಳನ್ನು ಇಪಿಎಫ್‌ಒ ವ್ಯಾಪ್ತಿಗೆ ತರಬಹುದು.

ಉದ್ಯೋಗಿಗಳ ಭವಿಷ್ಯ ನಿಧಿ ಅಡಿಯಲ್ಲಿ ಕನಿಷ್ಠ ವೇತನ ಮಿತಿಯನ್ನು ಕೊನೆಯದಾಗಿ 2014 ರಲ್ಲಿ ಬದಲಾಯಿಸಲಾಗಿತ್ತು. ಆಗ ಕನಿಷ್ಠ ವೇತನದ ಮಿತಿಯನ್ನು 6,500 ರೂ. ನಿಂದ 15, 000 ರೂ.ಗೆ ಹೆಚ್ಚಿಸಲಾಯಿತು. ಆದರೆ ಕಳೆದ 10 ವರ್ಷಗಳಲ್ಲಿ ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರು ಬಾಕಿ ಉಳಿದಿರುವ ವಿವಿಧ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದು, ಇದರಲ್ಲಿ ಕನಿಷ್ಠ ವೇತನದ ಜೊತೆಗೆ ಇಪಿಎಫ್‌ಗೆ ಸೇರಲು ಉದ್ಯೋಗಿಗಳ ಸಂಖ್ಯೆಯ ಮಿತಿಯನ್ನು ಹೆಚ್ಚಿಸುವ ಚಿಂತನೆ ನಡೆಸಲಾಗುತ್ತಿದೆ.

EPF And EPS

ಕನಿಷ್ಠ ವೇತನ ಹೆಚ್ಚಳ

ಕನಿಷ್ಠ ವೇತನ ಮಿತಿಯೊಂದಿಗೆ ಭವಿಷ್ಯ ನಿಧಿಗಾಗಿ ಉದ್ಯೋಗಿಗಳ ಸಂಬಳದಿಂದ ಹೆಚ್ಚಿನ ಹಣವನ್ನು ಕಡಿತಗೊಳಿಸಲಾಗುವುದು. ಇದರಿಂದ ನೌಕರರ ಪಿಂಚಣಿ ಯೋಜನೆಗೆ (ಇಪಿಎಸ್) ಕೊಡುಗೆಯೂ ಹೆಚ್ಚಾಗುತ್ತದೆ.

ಉದ್ಯೋಗಿ ಭವಿಷ್ಯ ನಿಧಿ ಅಡಿಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರು ತಮ್ಮ ಮೂಲ ವೇತನದ ಶೇ. 12 ಅನ್ನು ಇಪಿಎಫ್‌ಗೆ ನೀಡಬೇಕಾಗುತ್ತದೆ. ಉದ್ಯೋಗಿಯ ಇಪಿಎಫ್ ಖಾತೆಯ ಶೇ. 12ರಷ್ಟನ್ನು ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ. ಶೇ. 12ರಲ್ಲಿ ಶೇ. 8.33ರಷ್ಟನ್ನು ಇಪಿಎಸ್‌ನಲ್ಲಿ ಅಂದರೆ ಉದ್ಯೋಗಿಗಳ ಪಿಂಚಣಿ ಯೋಜನೆ ಮತ್ತು ಶೇ. 3.67ರಷ್ಟನ್ನು ಇಪಿಎಫ್ ಖಾತೆಯಲ್ಲಿ ಠೇವಣಿ ಮಾಡಲಾಗುತ್ತದೆ.

Gold Price Today: ಸ್ವರ್ಣಪ್ರಿಯರಿಗೆ ಭರ್ಜರಿ ಗುಡ್‌ನ್ಯೂಸ್‌! ಮತ್ತೆ ಚಿನ್ನದ ದರದಲ್ಲಿ ಭಾರೀ ಇಳಿಕೆ

ಇಪಿಎಫ್ ಅಡಿಯಲ್ಲಿ ಕನಿಷ್ಠ ವೇತನದ ಮಿತಿಯನ್ನು ಹೆಚ್ಚಿಸುವುದರೊಂದಿಗೆ ಉದ್ಯೋಗಿಯ ವೇತನವು ಇಪಿಎಫ್ ಖಾತೆಯಲ್ಲಿ ಹೆಚ್ಚು ಜಮೆಯಾಗುತ್ತದೆ. ಇದರಿಂದ ಇಪಿಎಸ್ ಮೇಲಿನ ಕೊಡುಗೆಯೂ ಹೆಚ್ಚಾಗುತ್ತದೆ.