ಬೆಂಗಳೂರು: ಅಕ್ಟೋಬರ್ 1, 2024 ರಿಂದ ಪ್ರಾರಂಭವಾಗುವ ತ್ರೈಮಾಸಿಕದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ (Small Savings Schemes) ಮೇಲಿನ ಬಡ್ಡಿದರಗಳಲ್ಲಿ ಸರ್ಕಾರ ಸೋಮವಾರ ಯಾವುದೇ ಬದಲಾವಣೆ ಮಾಡಿಲ್ಲ. 2024-25ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು 2024-25ರ ಹಣಕಾಸು ವರ್ಷದ ಅಕ್ಟೋಬರ್ 1 ರಿಂದ ಪ್ರಾರಂಭವಾಗಿ 2024ರ ಡಿಸೆಂಬರ್ 31 ಕ್ಕೆ ಕೊನೆಗೊಳ್ಳುತ್ತವೆ. ಇದು 2024-25 ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (ಜುಲೈ 1, 2024 ರಿಂದ ಸೆಪ್ಟೆಂಬರ್ 30, 2024) ರಂತೆಯೇ ಇರಲಿದೆ” ಎಂದು ಹಣಕಾಸು ಸಚಿವಾಲಯದ ಅಧಿಸೂಚನೆ ತಿಳಿಸಿದೆ.
The Finance Ministry keeps the rate of interest for small savings schemes unchanged for Q3 of FY25 @ETNOWlive @sw3etnsp1cy pic.twitter.com/IXWdI7zwJd
— Prakash Priyadarshi (@priyadarshi108) September 30, 2024
ಅಧಿಸೂಚನೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿಗಳು 8.2% ಬಡ್ಡಿದರ ನಿಗದಿಯಾಗಿದೆ. ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿದರವು ಶೇಕಡಾ 7.1 ರಷ್ಟಿದೆ. ಜನಪ್ರಿಯ ಪಿಪಿಎಫ್ ಮತ್ತು ಪೋಸ್ಟ್ ಆಫೀಸ್ ಉಳಿತಾಯ ಠೇವಣಿ ಯೋಜನೆಗಳ ಬಡ್ಡಿದರಗಳನ್ನು ಕ್ರಮವಾಗಿ ಶೇಕಡಾ 7.1 ಮತ್ತು ಶೇಕಡಾ 4 ರಷ್ಟು ಇದೆ.
ಇದನ್ನೂ ಓದಿ: Anupam Kher: 500 ರೂ. ನೋಟ್ ಮೇಲೆ ಗಾಂಧಿ ಬದಲು ಬಾಲಿವುಡ್ ನಟನ ಫೊಟೋ ಪ್ರಿಂಟ್!
ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿದರವು ಶೇಕಡಾ 7.5 ರಷ್ಟಿರುತ್ತದೆ. ಹೂಡಿಕೆಗಳು 115 ತಿಂಗಳಲ್ಲಿ ಮೆಚೂರ್ ಆಗುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (ಎನ್ಎಸ್ಸಿ) ಮೇಲಿನ ಬಡ್ಡಿದರವು ಜುಲೈ-ಸೆಪ್ಟೆಂಬರ್ 2024 ಅವಧಿಗೆ ಶೇಕಡಾ 7.7 ರಷ್ಟಿರುತ್ತದೆ.
ಪ್ರಸಕ್ತ ತ್ರೈಮಾಸಿಕದಂತೆ, ಮಾಸಿಕ ಆದಾಯ ಯೋಜನೆ ಹೂಡಿಕೆದಾರರಿಗೆ ಶೇಕಡಾ 7.4 ರಷ್ಟು ಬಡ್ಡಿ ನೀಡಲಾಗಿದೆ. ಅಂಚೆ ಕಚೇರಿಗಳು ಮತ್ತು ಬ್ಯಾಂಕುಗಳು ನಿರ್ವಹಿಸುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳ ಬಗ್ಗೆ ಸರ್ಕಾರವು ಪ್ರತಿ ತ್ರೈಮಾಸಿಕದಲ್ಲಿ ಅಧಿಸೂಚನೆ ನೀಡುತ್ತದೆ.