Thursday, 12th December 2024

ಸಾಮಾನ್ಯ ಭವಿಷ್ಯ ನಿಧಿ: ಶೇ.7.1 ಬಡ್ಡಿದರ ಮುಂದುವರಿಕೆ

ವದೆಹಲಿ: ಪ್ರಸಕ್ತ ಸಾಲಿನ ನಾಲ್ಕನೇ ತ್ರೈಮಾಸಿಕ ಅವಧಿಯ ಸಾಮಾನ್ಯ ಭವಿಷ್ಯ ನಿಧಿ(ಜಿಪಿಎಫ್) ಬಡ್ಡಿ ದರವನ್ನು ಕೇಂದ್ರ ಹಣಕಾಸು ಸಚಿವಾಲಯ ಪ್ರಕಟಿಸಿದೆ. ಹಾಲಿ ಇರುವ ಶೇ.7.1 ರಷ್ಟು ಬಡ್ಡಿ ದರವೇ ಮುಂದುವರೆಯಲಿದೆ ಎಂದು ತಿಳಿಸಿದೆ.

2024ರ ಜನವರಿ 1ರಿಂದ ಮಾರ್ಚ್ 31ರವರೆಗೆ ಹಾಲಿ ಶೇ. 7.1 ರಷ್ಟು ಬಡ್ಡಿದರ ಅನ್ವಯವಾಗಲಿದೆ.

ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಬರುವ ಆರ್ಥಿಕ ವ್ಯವಹಾರಗಳ ಕುರಿತಾದ ಇಲಾಖೆ ಪ್ರತಿ ಮೂರು ತಿಂಗಳಿಗೊಮ್ಮೆ ಜೆಪಿಎಫ್ ಬಡ್ಡಿ ದರ ಪರಿಷ್ಕರಿಸಲಿದೆ. ಕಳೆದ ಅಕ್ಟೋಬರ್ ನಲ್ಲಿ ಜಿಪಿಎಫ್ ಬಡ್ಡಿ ದರವನ್ನು ಶೇಕಡ 7.1ರ ಯಥಾಸ್ಥಿತಿಯಲ್ಲಿ ಮುಂದುವರೆಸಲಾಗಿತ್ತು.

ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆ(DEA) ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, 2023-2024 ರ ಅವಧಿಯಲ್ಲಿ, ಸಾಮಾನ್ಯ ಭವಿಷ್ಯ ನಿಧಿಗೆ ಚಂದಾದಾರರ ಜಮಾ ಮತ್ತು ಇತರವುಗಳಿಗೆ ಸಾಮಾನ್ಯ ಮಾಹಿತಿಯನ್ನು ಪ್ರಕಟಿಸಲಾಗಿದೆ.

ಸಾಮಾನ್ಯ ಭವಿಷ್ಯ ನಿಧಿಗಳು ಭಾರತೀಯ ಸರ್ಕಾರಿ ಉದ್ಯೋಗಿಗಳಿಗೆ ಮಾತ್ರ ನೀಡಲಾಗುವ ಭವಿಷ್ಯ ನಿಧಿಗಳಾಗಿವೆ. ಸರ್ಕಾರದಲ್ಲಿರುವ ಪ್ರತಿಯೊಬ್ಬರೂ ತಮ್ಮ ವೇತನದ ಒಂದು ಭಾಗವನ್ನು ಸಾಮಾನ್ಯ ಭವಿಷ್ಯ ನಿಧಿಗೆ ಕೊಡುಗೆ ನೀಡಲು ಅರ್ಹರಾಗಿರುತ್ತಾರೆ. ಪರಿಣಾಮವಾಗಿ, ನೌಕರರು ನಿವೃತ್ತಿಯಾದಾಗ, ಅವರು ತಮ್ಮ ಸೇವಾ ಅವಧಿಯ ಮೇಲೆ ಸಂಗ್ರಹವಾದ ಸಂಪೂರ್ಣ ಹಣವನ್ನು ಪಡೆಯುತ್ತಾರೆ.