Sunday, 15th December 2024

ಸೆಂಟ್ರಲ್ ವಿಸ್ಟಾ ಯೋಜನೆಗೆ ದೆಹಲಿ ಹೈಕೋರ್ಟ್ ಹಸಿರು ನಿಶಾನೆ

ನವದೆಹಲಿ: ಸೆಂಟ್ರಲ್ ವಿಸ್ಟಾ ಯೋಜನೆಯ ನಿರ್ಮಾಣ ಕಾಮಗಾರಿ ಮುಂದುವರಿಸಲು ದೆಹಲಿ ಹೈಕೋರ್ಟ್ ಸೋಮವಾರ ಹಸಿರು ನಿಶಾನೆ ತೋರಿಸಿದೆ.

ಸೆಂಟ್ರಲ್ ವಿಸ್ಟಾ ಯೋಜನೆ ದೇಶದ ಯೋಜನೆಯಾಗಿದ್ದು ಮುಖ್ಯ ಮತ್ತು ಅಗತ್ಯವಾಗಿದೆ ಎಂದು ಹೈಕೋರ್ಟ್ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ ಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ನೇತೃತ್ವದ ನ್ಯಾಯ ಪೀಠ, ಕರೋನಾ ವೈರಸ್ ಸಾಂಕ್ರಾಮಿಕ ನಡುವೆ ಸೆಂಟ್ರಲ್ ವಿಸ್ಟಾ ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿದೆ.

ಅರ್ಜಿಯು ಪ್ರಾಮಾಣಿಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ ಎಂದು ಕೂಡ ಹೇಳಿದೆ. ಅಲ್ಲದೇ, ಅರ್ಜಿ ಸಲ್ಲಿಸಿದವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಶಪೂರ್ಜಿ ಪಲ್ಲೊಂಜಿ ಗ್ರೂಪ್ ಗೆ ನೀಡಲಾಗಿರುವ ಕಾಮಗಾರಿ ಗುತ್ತಿಗೆಯಲ್ಲಿ, ಈ ವರ್ಷ ನವೆಂಬರ್ ಹೊತ್ತಿಗೆ ಕಾಮಗಾರಿ ಕೆಲಸ ಮುಗಿಯಬೇಕಾಗಿದೆ. ಹೀಗಾಗಿ ಕಾಮಗಾರಿ ಮುಂದುವರಿಯಲಿ ಎಂದು ಹೇಳಿದೆ.

ಸೆಂಟ್ರಲ್ ವಿಸ್ಟಾ ಯೋಜನೆಯ ಕಾನೂನಾತ್ಮಕತೆಯನ್ನು ಸುಪ್ರೀಂ ಕೋರ್ಟ್ ಈಗಾಗಲೇ ಎತ್ತಿ ಹಿಡಿದಿದೆ ಎಂದು ಕೂಡ ದೆಹಲಿ ಹೈಕೋರ್ಟ್ ಹೇಳಿದೆ.