ಠಾಣೆಯ ಹೊರಭಾಗದಲ್ಲಿರುವ ಕಂಬವೊಂದಕ್ಕೆ ರಾಕೆಟ್ ಬಂದು ಬಡಿದು, ಮರಳಿ ಪುಟಿ ದಿದ್ದರಿಂದ ಹೆಚ್ಚೇನೂ ತೊಂದರೆ ಯಾಗಲಿಲ್ಲ. ಪೊಲೀಸ್ ಠಾಣೆಯ ಬಾಗಿಲಿನ ಗಾಜು ಒಡೆದು ಹೋಗಿದ್ದು ಬಿಟ್ಟರೆ, ಕಟ್ಟಡವೂ ಜಾಸ್ತಿ ಹಾನಿಯಾಗಿಲ್ಲ. ಆದರೆ ಪೊಲೀಸ್ ಠಾಣೆ ಬಳಿಯೇ ಇದ್ದ ಒಂದು ಸೇವಾಕೇಂದ್ರದ ಕಿಟಕಿಯೂ ಒಡೆದಿದೆ ಎಂದು ವರದಿಯಾಗಿದೆ.
ಇನ್ನು ಗ್ರೆನೇಡ್ ದಾಳಿಯ ಮಾಹಿತಿ ಬರುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳು, ಡಿಜಿಪಿ ಗೌರವ್ ಯಾದವ್ ಮತ್ತು ವಿಧಿ ವಿಜ್ಞಾನ ತಂಡದ ಸಿಬ್ಬಂದಿ ಠಾಣೆಗೆ ಆಗಮಿಸಿದ್ದಾರೆ. ತನಿಖೆ ಪ್ರಾರಂಭವಾಗಿದೆ. ಈ ದಾಳಿಯ ಹಿಂದೆ ಪಾಕಿಸ್ತಾನಿ ಗುಪ್ತಚರ ಇಲಾಖೆ ಐಎಸ್ಐ ಆಶ್ರಯ ದಲ್ಲಿರುವ ಖಲಿಸ್ತಾನಿಗಳ ಕೈವಾಡವಿದೆ. ಖಲಿಸ್ತಾನಿ ಬೆಂಬಲಿತ ಭಯೋತ್ಪಾದಕರೇ ಈ ದಾಳಿ ನಡೆಸಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ.
ಇದೇ ವರ್ಷ ಮೇ ತಿಂಗಳಲ್ಲಿ ಪಂಜಾಬ್ನ ಮೊಹಾಲಿಯಲ್ಲಿರುವ ಗುಪ್ತಚರ ಇಲಾಖೆ ಪ್ರಧಾನ ಕಚೇರಿ ಮೇಲೆ ಹೀಗೆ ರಾಕೆಟ್ ಚಾಲಿತ ಗ್ರೆನೇಡ್ ದಾಳಿಯಾಗಿತ್ತು.