ಆರೋಪಿಗಳು ನಕಲಿ ದಾಖಲೆಗಳು, ವಿಳಾಸಗಳು ಮತ್ತು ನಕಲಿ ಗುರುತುಗಳನ್ನು ಬಳಸಿಕೊಂಡು ಸುಮಾರು 500 ನಕಲಿ ಸಂಸ್ಥೆಗಳ ಜಾಲ ಸೃಷ್ಟಿಸುವ ಮೂಲಕ ನಕಲಿ ಜಿಎಸ್ಟಿ ಇನ್ಪುಟ್ ತೆರಿಗೆ ಕ್ರೆಡಿಟ್ ದಂಧೆಯನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಬೋಗಸ್ ಸಂಸ್ಥೆಗಳ ಹೆಸರಿನಲ್ಲಿ ನಕಲಿ ಇನ್ವಾಯ್ಸ್ಗಳನ್ನು ನೀಡುವ ಮೂಲಕ ₹ 700 ಕೋಟಿಗೂ ಹೆಚ್ಚು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಅನ್ನು ಸೃಷ್ಟಿಸಿ ರವಾನಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದೋರ್ನಲ್ಲಿರುವ ಸೆಂಟ್ರಲ್ ಜಿಎಸ್ಟಿ ಕಮಿಷನರೇಟ್ ಮತ್ತು ಮಧ್ಯಪ್ರದೇಶ ಪೊಲೀಸರ ಸೈಬರ್ ಸೆಲ್ ಜಂಟಿ ತನಿಖೆಯಿಂದ ಆರೋಪಿಗಳು ವಿವಿಧ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲಾದ ಡಿಜಿಟಲ್ ವ್ಯಾಲೆಟ್ ಖಾತೆಗಳ ಮೂಲಕ ವಹಿವಾಟು ನಡೆಸು ತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಂಪ್ರದಾಯಿಕ ಬ್ಯಾಂಕಿಂಗ್ ಚಾನೆಲ್ಗಳನ್ನು ತಪ್ಪಿಸಲು ಆರೋಪಿಗಳು ಬಹು ಡಿಜಿಟಲ್ ವ್ಯಾಲೆಟ್ ಖಾತೆಗಳ ಮೂಲಕ ವಹಿವಾಟು ನಡೆಸುತ್ತಿದ್ದರು ಎಂದು ಸೈಬರ್ ಸೆಲ್ ಇಂದೋರ್ನ ಘಟಕ ಇನ್ಸ್ಪೆಕ್ಟರ್ ರಶೀದ್ ಹೇಳಿದ್ದಾರೆ.