Sunday, 15th December 2024

ಮಾರ್ಚ್ʼನಲ್ಲಿ ಅತಿ ಹೆಚ್ಚು ಜಿಎಸ್ಟಿ ತೆರಿಗೆ ಸಂಗ್ರಹ

ನವದೆಹಲಿ: ದೇಶದಲ್ಲಿ ಜಿಎಸ್ಟಿ ಕಾನೂನು ಜಾರಿಯಾದ ನಂತರ ದಾಖಲೆಯ ಜಿಎಸ್ಟಿ ಸಂಗ್ರಹವು ಮಾರ್ಚ್ 2022ರಲ್ಲಿ ಬಂದಿದೆ.

2021-22ರ ಆರ್ಥಿಕ ವರ್ಷದ ಕೊನೆಯ ತಿಂಗಳಲ್ಲಿ ಅಂದರೆ 2022ರ ಮಾರ್ಚ್ʼನಲ್ಲಿ ಜಿಎಸ್ಟಿ ಸಂಗ್ರಹವು 1.42 ಲಕ್ಷ ಕೋಟಿ ರೂ.ಗೆ ಅಂದರೆ, 1,42,095 ಕೋಟಿ ರೂ.ಗೆ ತಲುಪಿದೆ. ಒಂದೇ ತಿಂಗಳಲ್ಲಿ ಅತಿ ಹೆಚ್ಚು ಜಿಎಸ್ಟಿ ತೆರಿಗೆ ಸಂಗ್ರಹವಾಗಿದೆ.

ಹಣಕಾಸು ಸಚಿವಾಲಯವು ಸ್ವಲ್ಪ ಸಮಯದ ಹಿಂದೆ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಈ ಬಗ್ಗೆ ಮಾಹಿತಿ ನೀಡಿದ್ದು, ಜಿಎಸ್ಟಿ ಸಂಗ್ರಹವು ದಾಖಲೆಯ ಮಟ್ಟಕ್ಕೆ ಬಂದಿದೆ. ಇದು 2022ರ ಜನವರಿಯಲ್ಲಿ 1,40,986 ಕೋಟಿ ರೂ.ಗಳ ದಾಖಲೆ ಮುರಿದಿದೆ ಎಂದು ಹೇಳಿದೆ.