Friday, 22nd November 2024

ಕೋವಿಡ್‌ ಔಷಧಿ, ಕಿಟ್‌ಗಳ ಮೇಲಿನ ತೆರಿಗೆ ಶೇ.12 ರಿಂದ ಶೇ 5ಕ್ಕೆ ಇಳಿಕೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ನೇತೃತ್ವದಲ್ಲಿ ಶನಿವಾರ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯು ಕೋವಿಡ್ -19 ಔಷಧಿಗಳಾದ ರೆಮ್‌ಡೆಸಿವಿರ್ ಮತ್ತು ಆಮ್ಲಜನಕ ಕಾನ್ಸಂಟ್ರೇಟರ್ ಗಳು ಮತ್ತು ವೈದ್ಯಕೀಯ ಆಮ್ಲಜನಕದಂತಹ ಸರಕುಗಳಿಗೆ ತೆರಿಗೆ ದರವನ್ನು ಕಡಿತಗೊಳಿಸಿದೆ.

Tocilizumab ಹಾಗೂ Amphotericin B ಔಷಧಿಗಳ ಮೇಲೆ ಜಿಎಸ್‌ಟಿಯನ್ನು ಶೇ.5ಕ್ಕೆ ನಿಗದಿಪಡಿಸಿದರೆ ರೆಮ್‌ಡೆಸಿವಿರ್ ಮತ್ತು ಹೆಪಾರಿನ್‌ನಂತಹ ಆಂಟಿ ಕೋಗುಲಂಟ್‌ಗಳ ಮೇಲಿನ ತೆರಿಗೆಯನ್ನು ಶೇ.12 ರಿಂದ 5 ಕ್ಕೆ ಇಳಿಸಲಾಗಿದೆ.

ವೈದ್ಯಕೀಯ ಆಮ್ಲಜನಕ, ಆಮ್ಲಜನಕ ಕಾನ್ಸಂಟ್ರೇಟರ್ ಗಳು, ವೆಂಟಿಲೇಟರ್‌ ಗಳು, ಬೈಪಾಪ್ ಯಂತ್ರಗಳು ಮತ್ತು ಹೈ ಫ್ಲೋ ನಾಸಲ್ ಕ್ಯಾನುಲ್ಲಾ ಸಾಧನಗಳ ಮೇಲಿನ ತೆರಿಗೆಯನ್ನುಕಡಿತಗೊಳಿಸಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾ ರಾಮನ್ ತಿಳಿಸಿದ್ದಾರೆ.

ಕೋವಿಡ್ ಪರೀಕ್ಷಾ ಕಿಟ್‌ಗಳ ಮೇಲಿನ ತೆರಿಗೆಯನ್ನು ಶೇ.12 ರಿಂದ ಶೇ 5 ಕ್ಕೆ ಇಳಿಸ ಲಾಗಿದೆ. ಪಲ್ಸ್ ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್, ತಾಪಮಾನ ತಪಾಸಣೆ ಉಪಕರಣಗಳು ಮತ್ತು ಆಂಬುಲೆನ್ಸ್‌ಗಳ ಮೇಲೆ ಸಹ ತೆರಿಗೆಯನ್ನು ಶೇ.5 ರಷ್ಟು ಇಳಿಕೆ ಮಾಡಲಾಗಿದೆ ಎಂದು ಹೇಳಿದರು.