Friday, 22nd November 2024

ತೀರ್ಮಾನವಾಗದ ಆದಾಯ ನಷ್ಟ ಪರಿಹಾರ ವಿಚಾರ: ಅ.12ರಂದು ಮುಂದಿನ ಸಭೆ

ನವದೆಹಲಿ: ಕಳೆದ ಸೋಮವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್ ಟಿ ಸಮಿತಿ ಸಭೆಯಲ್ಲಿ ರಾಜ್ಯಗಳಿಗೆ ಆದಾಯ ನಷ್ಟ ಪರಿಹಾರ ವಿಚಾರದಲ್ಲಿ ಯಾವುದೇ ತೀರ್ಮಾನ ಆಗಿಲ್ಲ. ಆದ್ದರಿಂದ ಸಭೆಯನ್ನು ಮುಂದಿನ ಅಕ್ಟೋಬರ್ 12ಕ್ಕೆ ಮುಂದೂಡಲಾಯಿತು.

20017- 18ನೇ ಸಾಲಿನ ಇಂಟಿಗ್ರೇಟೆಡ್ ಜಿಎಸ್ ಟಿ 25 ಸಾವಿರ ಕೋಟಿ ರುಪಾಯಿಯನ್ನು ಮುಮ್ದಿನ ವಾರದ ಕೊನೆ ಹೊತ್ತಿಗೆ ಬಿಡು ಗಡೆ ಮಾಡಲಾಗುವುದು. ಈ ಹಿಂದೆ ಕಡಿಮೆ ಪಡೆದಂಥ ರಾಜ್ಯಗಳು ಅದನ್ನು ಪಡೆಯುತ್ತವೆ ಎಂದು ಅವರು ಹೇಳಿದರು.

ಐದು ವರ್ಷದ ಅವಧಿಗೆ, ಅಂದರೆ 2022ರ ಜೂನ್ ತನಕ ಹಾಕಬೇಕು ಎಂದಿಕೊಂಡಿದ್ದ ಜಿಎಸ್ ಟಿ ಪರಿಹಾರ ಸೆಸ್ ಅನ್ನು ಅದರ ಆಚೆಗೂ ವಿಸ್ತರಿಸುವ ಪ್ರಸ್ತಾವ ಬಂತು. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಇನ್ನೂ ಲೆಕ್ಕಾಚಾರಗಳು ಆಗಬೇಕಿದೆ ಎಂದು ತಿಳಿಸಲಾಗಿದೆ.

ಪರ್ಯಾಯ ಮಾರ್ಗಗಳನ್ನು ಹುಡುಕುವುದಕ್ಕೆ ಅಂತಲೇ ಸಮಯ ವ್ಯರ್ಥ ಮಾಡದೆ ಅಗತ್ಯ ಇರುವ ಹಣಕಾಸು ಸಂಪನ್ಮೂಲ ವನ್ನು ವ್ಯವಸ್ಥೆ ಮಾಡುವುದಕ್ಕೆ ಕೇಂದ್ರ ಪ್ರಯತ್ನಿಸಬೇಕು ಎಂದು ಬಿಹಾರದ ಡಿಸಿಎಂ ಸುಶೀಲ್ ಮೋದಿ ಹೇಳಿದ್ದಾರೆ. ಇನ್ನು ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳ ಮುಂದೆ ಇಟ್ಟಿದ್ದ ಎರಡು ಸಾಲ ಯೋಜನೆಗಳ ಪ್ರಸ್ತಾವವನ್ನೂ ಕೇರಳ ತಿರಸ್ಕರಿಸಿದೆ.