Friday, 22nd November 2024

ಕೋವಿಡ್‌ ಲಸಿಕೆಗೆ ತೆರಿಗೆ ವಿನಾಯಿತಿ ?: ನಾಳೆ ಜಿಎಸ್’ಟಿ ಸಭೆ

ನವದೆಹಲಿ: ಕೋವಿಡ್‌ ನಿರ್ವಹಣೆಯಲ್ಲಿ ಅಗತ್ಯವಾಗಿರುವ ವಸ್ತುಗಳು ಹಾಗೂ ಬ್ಲ್ಯಾಕ್ ಫಂಗಸ್‌ ಚಿಕಿತ್ಸೆಗೆ ಬಳಸುವ ಔಷಧಕ್ಕೆ ತೆರಿಗೆ ಪ್ರಮಾಣ ತಗ್ಗಿಸುವ ಬಗ್ಗೆ ಚರ್ಚಿಸಲು ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಶನಿವಾರ ಸಭೆ ಸೇರಲಿದೆ.

ಕೋವಿಡ್‌ ನಿರ್ವಹಣೆಗೆ ಅಗತ್ಯವಿರುವ ವಸ್ತುಗಳ ಮೇಲಿನ ತೆರಿಗೆ ಪ್ರಮಾಣ ತಗ್ಗಿಸುವ ಬಗ್ಗೆ ಪರಿಶೀಲಿಸಿ, ಶಿಫಾರಸು ಮಾಡಲು ಸಚಿವರ ಸಮಿತಿ ಯೊಂದನ್ನು ಮೇ 28ರಂದು ನಡೆದ ಜಿಎಸ್‌ಟಿ ಮಂಡಳಿ ಸಭೆಯು ರಚಿಸಿತ್ತು.

ವರದಿಯ ಬಗ್ಗೆ ಚರ್ಚಿಸಿ, ತೆರಿಗೆ ಪ್ರಮಾಣ ತಗ್ಗಿಸುವ ಬಗ್ಗೆ ‍ಪರಿಶೀಲನೆ ನಡೆಸಲು ಜಿಎಸ್‌ಟಿ ಮಂಡಳಿ ಶನಿವಾರ ಸಭೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿ ದ್ದಾರೆ.

ವೈದ್ಯಕೀಯ ಆಮ್ಲಜನಕ, ಪಲ್ಸ್‌ ಆಕ್ಸಿಮೀಟರ್, ಸ್ಯಾನಿಟೈಸರ್, ಆಮ್ಲಜನಕದ ಕಾನ್ಸನ್‌ಟ್ರೇಟರ್‌, ವೆಂಟಿಲೇಟರ್, ಪಿ‍‍‍ಪಿಇ ಕಿಟ್, ಎನ್‌-95 ಮುಖಗವಸು ಇತ್ಯಾದಿಗಳಿಗೆ ತೆರಿಗೆ ಪ್ರಮಾಣ ತಗ್ಗಿಸಬೇಕೇ ಅಥವಾ ವಿನಾಯಿತಿ ನೀಡಬೇಕೇ ಎಂಬುದನ್ನು ಪರಿಶೀಲಿ ಸಲು ಸಚಿವರ ಸಮಿತಿಗೆ ಸೂಚಿಸಲಾಗಿದೆ.