Thursday, 12th December 2024

ಗುಜರಾತ್​: ಕೊನೆಯ ಹಂತದ ಮತದಾನ ಇಂದು

ಅಹಮದಾಬಾದ್​ (ಗುಜರಾತ್​): ಗುಜರಾತ್​ ರಾಜ್ಯ ವಿಧಾನಸಭೆ ಚುನಾವಣೆಯ 2ನೇ ಮತ್ತು ಕೊನೆಯ ಹಂತದ ಮತದಾನ ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮನವಿ ಮಾಡಿದ್ದಾರೆ.
2 ಹಂತದ ಮತದಾನದಲ್ಲಿ 14 ಜಿಲ್ಲೆಗಳ 93 ಕ್ಷೇತ್ರಗಳಿಗೆ ಮತದಾನ ಆರಂಭ ಗೊಂಡಿದೆ. ಇಂದು ನಡೆಯುವ ಮತದಾನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಕೂಡ ತಮ್ಮ ಹಕ್ಕು ಚಲಾಯಿಸಲಿದ್ದಾರೆ. 89 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ನಡೆದ ಚುನಾವಣೆಯಲ್ಲಿ ಶೇ.60 ರಷ್ಟು ಮಾತ್ರ ಮತದಾನ ವಾಗಿತ್ತು. ಇದು ಕಳೆದ ಚುನಾವಣೆ ಗಿಂತಲೂ ಕಡಿಮೆ ಪ್ರಮಾಣವಾಗಿತ್ತು.

ಇಂದಿನ ಚುನಾವಣೆಯಲ್ಲಿ ಮತದಾರರು ಎಷ್ಟರಮಟ್ಟಿಗೆ ಪಾಲ್ಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಮೊದಲ ಹಂತದ ಮತದಾನದಂದು ಪ್ರಧಾನಿ ಮೋದಿ ಅವರು 2ನೇ ಹಂತದ ಮತಕ್ಷೇತ್ರ ಗಳಲ್ಲಿ 54 ಕಿಲೋ ಮೀಟರ್ ಉದ್ದದ ಭರ್ಜರಿ ರೋಡ್​ ಶೋ ನಡೆಸಿ ಸಂಚಲನ ಉಂಟು ಮಾಡಿದ್ದರು. ಇಷ್ಟು ಉದ್ದಕ್ಕೂ ರಸ್ತೆಗಳ ಇಕ್ಕೆಲಗಳಲ್ಲಿ 9 ಲಕ್ಷಕ್ಕೂ ಅಧಿಕ ಜನರು ಸೇರಿದ್ದು ದಾಖಲೆಯಾಗಿತ್ತು. ಇದು ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ ಎಂದೇ ಅಂದಾಜಿಸಲಾಗಿದೆ.

93 ಸೀಟುಗಳಲ್ಲಿ ಬಿಜೆಪಿ, ಕಾಂಗ್ರೆಸ್​, ಆಪ್​ ಸೇರಿದಂತೆ 61 ಪಕ್ಷಗಳ 833 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 285 ಸ್ವತಂತ್ರ ಅಭ್ಯರ್ಥಿಗಳು ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಕಳೆದ ಸಲ ಇಷ್ಟು ಕ್ಷೇತ್ರಗಳಲ್ಲಿ 51 ಸ್ಥಾನಗಳನ್ನು ಬಿಜೆಪಿ, 39 ಕಾಂಗ್ರೆಸ್​, 3 ಕ್ಷೇತ್ರಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಇಂದಿನ ಮತದಾನದಲ್ಲಿ ಪ್ರಧಾನಿ ಮೋದಿ ಅವರು ಅಹಮದಾ ಬಾದ್​ನ ಸಾಬರಮತಿ ಕ್ಷೇತ್ರದ ರಾಣಿಪ್​ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಇದಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಗೃಹ ಸಚಿವ ಅಮಿತ್​ ಶಾ ಅವರೂ ಮತದಾನದಲ್ಲಿ ಭಾಗಿಯಾಗಲಿದ್ದು, ನಾರನ್​ಪುರ ಬೂತ್​ನಲ್ಲಿ ಅವರು ಮತದಾನ ಮಾಡಲಿದ್ದಾರೆನೆಂದು ಹೇಳಿದ್ದಾರೆ.