Sunday, 15th December 2024

ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಸಿಎಂ ಅನ್ನು ಮತದಾರರೇ ನಿರ್ಧರಿಸಲಿ: ಕೇಜ್ರಿವಾಲ್‌

Arvind Kejrival

ಸೂರತ್‌: ಗುಜರಾತ್‌ನಲ್ಲಿ ಆಮ್‌ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗಿರ ಬೇಕು ಎಂಬುದನ್ನು ಮತದಾರರೇ ತೀರ್ಮಾನಿಸಲಿ ಎಂದು ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ಗುಜರಾತ್‌ ಪ್ರವಾಸ ಕೈಗೊಂಡಿರುವ ಆಮ್‌ ಆದ್ಮಿ ಪಕ್ಷದ ಸಂಚಾಲಕ, ದೆಹಲಿ ಮುಖ್ಯ ಮಂತ್ರಿ ಅರವಿಂದ ಕೇಜ್ರಿವಾಲ್‌ ಈ ಬಗ್ಗೆ ಶನಿವಾರ ಮಾತನಾಡಿ, ‘ಮುಂದಿನ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಗುಜರಾತ್ ಜನತೆಯೇ ಹೇಳಬೇಕೆಂದು ನಾನು ಬಯಸುತ್ತೇನೆ. ನಾವು ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯನ್ನು ನೀಡುತ್ತಿದ್ದೇವೆ.

ನವೆಂಬರ್ 3 ರಂದು ಸಂಜೆ 5ರ ಒಳಗಾಗಿ ಜನ ತಮ್ಮ ಅಭಿಪ್ರಾಯಗಳನ್ನು ತಿಳಿಸ ಬಹುದು. ನವೆಂಬರ್ 4ರಂದು ಫಲಿತಾಂಶ ವನ್ನು (ಎಎಪಿಯಿಂದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು) ಪ್ರಕಟಿಸುತ್ತೇವೆ’ ಎಂದು ಹೇಳಿದ್ದಾರೆ.

‘ಸಾರ್ವಜನಿಕರು 6357000360ಗೆ ಕರೆ ಮಾಡಿ, ಸಂದೇಶ, ಧ್ವನಿ ಸಂದೇಶ ಕಳುಹಿಸಿ, ವಾಟ್ಸ್‌ಆಯಪ್‌ ಮಾಡಿ ತಮ್ಮ ಆಯ್ಕೆ ತಿಳಿಸಬಹುದು. ಅದಲ್ಲದೇ aapnocm@gmail.comಗೆ ಇಮೇಲ್ ಮಾಡಿಯೂ ತಮ್ಮ ಆಯ್ಕೆಯನ್ನು ತಿಳಿಸಬಹುದು’ ಎಂದು ಕೇಜ್ರಿವಾಲ್‌ ತಿಳಿಸಿದ್ದಾರೆ.