Wednesday, 11th December 2024

ಗುಜರಾತ್ ನಲ್ಲಿ ‘ಚಂಡೀಪುರ’ ವೈರಸ್ ಪತ್ತೆ: ಐವರು ಮಕ್ಕಳ ಸಾವು

ಹಮದಾಬಾದ್: ಗುಜರಾತ್ ನಲ್ಲಿ ಮಹಾಮಾರಿ ‘ಚಂಡೀಪುರ’ ವೈರಸ್ ಪತ್ತೆಯಾಗಿದ್ದು, ಈ ಸೋಂಕಿಗೆ ಐವರು ಮಕ್ಕಳು ಮೃತಪಟ್ಟಿದ್ದಾರೆ.

ಗುಜರಾತ್ ನ ಸಬರಕಾಂತ ಜಿಲ್ಲೆಯಲ್ಲಿ ಚಂಡೀಪುರ ವೈರಸ್ ಪತ್ತೆಯಾಗಿದೆ. ಈ ವೈರಸ್ ನಿಂದಾಗಿ ಈವರೆಗೆ ಐವರು ಮಕ್ಕಳು ಮೃತಪಟ್ಟಿದ್ದು, ಮೂವರರು ಮಕ್ಕಳು ಮಾರಣಂತಿಕ ಸೋಂಕಿನಿಂದ ನರಳಾಡುತ್ತಿದ್ದಾರೆ.

ಮೂವರಿಗೂ ಹಿಮ್ಮತ್ ನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಇನ್ನು 6 ಮಕ್ಕಳ ರಕ್ತದ ಮಾದರಿಯನ್ನು ಪುಣೆ ಮೂಲದ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ರವಾನಿಸಲಾಗಿದೆ.

ಚಂಡೀಪುರ ವೈರಸ್ ನಿಂದ ಅತೀವ ಜ್ವರ, ಮೆದುಳಿನ ಉರಿಯೂತವುಂಟಾಗುತ್ತದೆ. ಇದರಿಂದಾಗಿ ಸಾವುಗಳು ಸಂಭವಿಸುತ್ತವೆ. ಸೊಳ್ಳೆಗಳು, ಉಣ್ಣೆ ಹಾಗೂ ಮರಳು ನೊಣಗಳಿಂದ ಈ ಸೋಂಕು ಹರಡುತ್ತದೆ ಎಂದು ತಿಳಿದುಬಂದಿದೆ.