ಅಹಮದಾಬಾದ್: ಅಹಮದಾಬಾದ್‌ನ ಥಾಲ್ತೇಜ್ ಪ್ರದೇಶದಲ್ಲಿ ವಾಸಿಸುತ್ತಿರುವ ಐಪಿಎಸ್ ಅಧಿಕಾರಿ ರಾಜನ್ ಸುಸ್ರಾ ಅವರ ಪತ್ನಿ ಶಾಲುಬೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸ್ಥಳೀಯ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ. ರಾಜನ್ ಸುಸ್ರಾ ಅವರು ವಲ್ಸಾದ್ ಮೆರಿಟೈಮ್ ಸೆಕ್ಯುರಿಟಿಯಲ್ಲಿ ಎಸಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜನ್ ಸುಸ್ರಾ ಅವರು ತಮ್ಮ ಕುಟುಂಬದೊಂದಿಗೆ ಥಾಲ್ತೇಜ್‌ನಲ್ಲಿರುವ ಶಾಂಗ್ರಿಲಾ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ.
ಘಟನೆ ಹೇಗೆ ನಡೆದಿದೆ ಎಂಬುದು ನಮಗೂ ಗೊತ್ತಿಲ್ಲ. ಸಾಹೇಬರು ನಾಲ್ಕೈದು ದಿನ ಮದುವೆ ಸಮಾರಂಭದಲ್ಲಿದ್ದು, ಗುರುವಾರ ಮಧ್ಯಾಹ್ನ ಮನೆಗೆ ಬಂದಿದ್ದರು. ರಾತ್ರಿ ಸಂಬಂಧಿಕರ ಮದುವೆಯಿಂದ ನಮ್ಮ ಅತ್ತೆ ಹಿಂತಿರುಗಿದಾಗ, ಸಾಮಾನ್ಯವಾಗಿ ಅತ್ತೆ ಪ್ರತಿದಿನ ಬೆಳಗ್ಗೆ ಪೂಜೆಗಾಗಿ ಬೇಗನೆ ಏಳುತ್ತಾರೆ. ಆದರೆ ಇವತ್ತು ಸರ್ ಕೆಳಗಿಳಿದು ಬಾಗಿಲು ತೆರೆದು ನೋಡಿದಾಗ ನಮ್ಮ ಅತ್ತೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ನಂತರ ನಾವು ನೇರವಾಗಿ ಪೊಲೀಸರಿಗೆ ಕರೆ ಮಾಡಿದ್ದೆವು ಎಂದು ಮೃತರ ಸೋದರಳಿಯ ಹೇಳಿದ್ದಾರೆ.
ಸೂರತ್‌ನಿಂದ ಅಹಮದಾಬಾದ್‌ಗೆ ಮರಳಿದ ನಂತರ ಶಾಲುಬೆನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಸ್ಥಳದಲ್ಲಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಈ ಘಟನೆ ಕುರಿತು ಬೋಡಕ್‌ದೇವ್ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೋಲಾ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿದೆ.