Sunday, 15th December 2024

Gurpatwant Singh Pannun: ಖಲಿಸ್ತಾನಿ ಉಗ್ರ ಪನ್ನುನ್‌ ಹತ್ಯೆಗೆ ಮಾಜಿ ʻರಾʼ ಅಧಿಕಾರಿ ಯತ್ನ; ಅಮೆರಿಕ ಆರೋಪ

pannun

ನವದೆಹಲಿ: ಅಮೆರಿಕದ ನೆಲದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪಂತ್‌ ಸಿಂಗ್‌ ಪನ್ನುನ್‌(Gurpatwant Singh Pannun) ಹತ್ಯೆಗೆ ಭಾರತೀಯ ಗುಪ್ತಚರ ಅಧಿಕಾರಿಗಯೊಬ್ಬರು(Intelligence Official) ಸಂಚು ರೂಪಿಸಿದ್ದರು ಎಂದು ಅಮೆರಿಕ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ತನಿಖಾ ಮಂಡಳಿ ಅಮೆರಿಕಕ್ಕೆ ಭೇಟಿ ನೀಡಿರುವ ಬೆನ್ನಲ್ಲೇ ಅಮೆರಿಕ ಈ ಆರೋಪ ಹೊರಿಸಿದ್ದಾರೆ.

ಅಮೆರಿಕದಲ್ಲಿ CC-1 ಎಂದು ಮಾತ್ರ ಉಲ್ಲೇಖಿರುವ ಭಾರತೀಯ ಗುಪ್ತಚರ ಅಧಿಕಾರಿ ವಿಕಾಸ್ ಯಾದವ್ (39) ಎಂಬುವವರು ಪನ್ನುನ್‌ ಅವರನ್ನು ಹತ್ಯೆಗೆ ವಿಫಲ ಯತ್ನ ನಡೆಸಿದ್ದಾರೆ. ಅವರು ವಿಕಾಸ್ ಮತ್ತು ಅಮಾನತ್ ಎಂದೂ ಕರೆಯಲ್ಪಡುವ ವಿಕಾಸ್ ಯಾದವ್‌ನನ್ನು ನ್ಯೂಯಾರ್ಕ್ ನಗರದಲ್ಲಿ ಯುಎಸ್ ಪ್ರಜೆಯನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದರು. ಸಿಖ್ಸ್ ಫಾರ್ ಜಸ್ಟಿಸ್ (SFJ) ನ ನಾಯಕ ಪನ್ನುನ್ ಭಾರತದ ಪ್ರಮುಖ ಗುರಿ ಎಂದು ಯುಎಸ್ ಅಧಿಕಾರಿಗಳು ಆರೋಪಿಸಿದ್ದಾರೆ.

ಇನ್ನು ಅಮೆರಿಕದ ಹೊಸ ಆರೋಪದ ಬಗ್ಗೆ ಭಾರತೀಯ ಅಧಿಕಾರಿಗಳಿಂದ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಪನ್ನುನ್ ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಅಧಿಕಾರಿಯನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಅಧಿಕಾರಿ ವಿಕ್ರಮ್ ಯಾದವ್ ಎಂದು ಗುರುತಿಸಲಾಗಿದೆ. ಇವರು ಭಾರತದ ಗುಪ್ತಚರ ಇಲಾಖೆ ಗು ರಿಸರ್ಚ್ ಮತ್ತು ಅನಾಲಿಸಿಸ್ ವಿಂಗ್ (RAW)ಗೆ ಸೇರಿದವರಾಗಿದ್ದಾರೆ. ಇನ್ನು ವಿಕ್ರಮ್ ಯಾದವ್ ಮತ್ತು ವಿಕಾಶ್ ಯಾದವ್ ಒಂದೇ ವ್ಯಕ್ತಿಯೇ ಎಂದು ತಿಳಿದಿಲ್ಲ.

ಇನ್ನು ನಿನ್ನಿಯಷ್ಟೇ ಖಲಿಸ್ತಾನಿ ಮುಖಂಡರಿಗೆ ಬೆಂಬಲ ನೀಡುತ್ತಿರುವ ವಿಚಾರವಾಗಿ ಕೆನಡಾ ಮತ್ತು ಭಾರತದ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ತನಗೆ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ(Justin Trudeau) ಜತೆ ನಂಟು ಇರುವುದಾಗಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ಒಪ್ಪಿಕೊಂಡಿದ್ದಾನೆ.

ಸಿಖ್ಸ್ ಫಾರ್ ಜಸ್ಟಿಸ್ (SFJ) ಗುಂಪಿನ ಸಾಮಾನ್ಯ ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನುನ್‌ನನ್ನು ಈಗಾಗಲೇ ಭಾರತ ಸರ್ಕಾರ ಭಯೋತ್ಪಾದಕ ಎಂದು ಘೋಷಿಸಿದೆ. ಕೆಲವು ದಿನಗಳ ಹಿಂದೆ ಕೆನಡಾದ ನೆಲದಲ್ಲಿ ಭಾರತ ಬೇಹುಗಾರಿಕೆ ನಡೆಸುತ್ತಿದೆ ಎಂದು ಕೆನಡಾ ಆರೋಪವನ್ನು ಎತ್ತಿಹಿಡಿದಿರುವ ಪನ್ನುನ್‌, ಅವರು ಕಳೆದ ಹಲವಾರು ವರ್ಷಗಳಿಂದ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಕಚೇರಿಯೊಂದಿಗೆ ಸಂವಹನ ನಡೆಸುವುದನ್ನು ಒಪ್ಪಿಕೊಂಡಿದ್ದಾನೆ.

ಈ ಸುದ್ದಿಯನ್ನೂ ಓದಿ: Gurpatwant Singh Pannun: ಜಸ್ಟಿನ್‌ ಟ್ರುಡೋ ಜತೆ ಸಂಪರ್ಕ ಇರೋದಾಗಿ ಒಪ್ಪಿಕೊಂಡ ಖಲಿಸ್ತಾನಿ ಉಗ್ರ ಪನ್ನುನ್‌