Sunday, 15th December 2024

ಗುರು ನಾನಕ್ ಜಯಂತಿ: ದೇಶದ ಜನತೆಗೆ ಶುಭ ಕೋರಿದ ಪ್ರಧಾನಿ, ರಾಷ್ಟ್ರಪತಿ

ನವದೆಹಲಿ: ಗುರು ನಾನಕ್ ಜಯಂತಿ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ ಶುಭಾಶಯ ಕೋರಿ, ಗುರು ನಾನಕ್ ಅವರಿಗೆ ಗೌರವ ಸಲ್ಲಿಸಿದ್ದಾರೆ.

‘ಏಕತೆ, ಸಾಮರಸ್ಯ, ಭ್ರಾತೃತ್ವ, ಸೌಹಾರ್ದತೆ ಮತ್ತು ಸೇವೆಯ ಹಾದಿ ತೋರಿಸಿ ರುವ ಗುರು ನಾನಕರು ಕಠಿಣ ಪರಿಶ್ರಮ, ಪ್ರಾಮಾಣಿ ಕತೆ ಹಾಗೂ ಸ್ವಾಭಿಮಾ ನದ ಆಧಾರದ ಮೇಲೆ ಜೀವನಶೈಲಿಯನ್ನು ಸಾಕಾರಗೊಳಿಸಲು ಆರ್ಥಿಕ ತತ್ವಶಾಸ್ತ್ರವನ್ನೂ ಬೋಧಿ ಸಿದ್ದರು’ ಎಂದು ರಾಷ್ಟ್ರಪತಿಗಳು ಟ್ವೀಟ್ ಮಾಡಿ ದ್ದಾರೆ.

ದೇಶದ ನಾಗರಿಕರಿಗೆ, ವಿಶೇಷವಾಗಿ ಸಿಖ್ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಅವರ ಬೋಧನೆಗಳ ಅನುಸರಿಸಿ ಕೊಂಡು ಮುನ್ನಡೆಯ ಬೇಕು ಎಂದು ನಾವು ನಿರ್ಧರಿಸೋಣ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

‘ಗುರು ನಾನಕ್ ದೇವ್‌ ಜೀ ಅವರಿಗೆ ನಮಸ್ಕರಿಸುತ್ತೇನೆ. ಅವರ ಚಿಂತನೆಗಳು ಸಮಾಜದ ಸೇವೆ ಮಾಡಲು ಮತ್ತು ಭೂಮಿಯ ಸಂರಕ್ಷಣೆ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲು ನಮ್ಮನ್ನು ಪ್ರರೇಪಿಸುತ್ತಿರಲಿ’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.