ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಮೂರು ದಿನಗಳ ಭೇಟಿಗಾಗಿ ಬುಧವಾರ ಭಾರತಕ್ಕೆ ಆಗಮಿಸಿದ್ದಾರೆ.
ಗುಟೆರೆಸ್ ಅವರು ಅ.20ರವರೆಗೂ ಭಾರತದಲ್ಲಿ ಇರಲಿದ್ದಾರೆ. ಜನವರಿ 2022 ರಲ್ಲಿ ತಮ್ಮ ಎರಡನೇ ಅವಧಿಯ ಅಧಿಕಾರ ಪ್ರಾರಂಭಿಸಿದಾಗಿನಿಂದ ಇದು ಯುಎನ್‌ಎಸ್‌ಜಿಯ ಮೊದಲ ಭಾರತ ಭೇಟಿಯಾಗಿದೆ. ಗುಟೆರಸ್ ಈ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು 2018ರ ಏಪ್ರಿಲ್ 1ರಂದು ಭೇಟಿ ನೀಡಿದ್ದರು. ಭಾರತದ ಮುಂಬೈಗೆ ಆಗಮಿಸು ತ್ತಿರುವ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರಿಗೆ ಆತ್ಮೀಯ ಸ್ವಾಗತ ಎಂದು ವಿದೇಶಾಂಗ ವ್ಯವಹಾರ ಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಟ್ವೀಟ್ ಮಾಡಿದ್ದಾರೆ.
ಗುಟೆರಸ್ ಅವರು ಅ.20ರಂದು ಗುಜರಾತ್‌ನಲ್ಲಿ (ಏಕ್ತಾ ನಗರ, ಕೆವಾಡಿಯಾ), ಅವರು ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನ ಶೈಲಿ) ಬುಕ್‌ಲೆಟ್, ಲೋಗೋ ಮತ್ತು ಟ್ಯಾಗ್‌ಲೈನ್‌ನ ಬಿಡುಗಡೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪಾಲ್ಗೊಳ್ಳಲಿದ್ದಾರೆ.