Thursday, 12th December 2024

ಗ್ವಾಲಿಯರ್‌ನಲ್ಲಿ 4.0 ತೀವ್ರತೆಯ ಭೂಕಂಪ

ಗ್ವಾಲಿಯರ್‌: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಬೆಳಗ್ಗೆ 4.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಗ್ವಾಲಿಯರ್‌ನಲ್ಲಿ ಭೂಮಿಯಿಂದ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಭೂಕಂಪದ ಕೇಂದ್ರಬಿಂದು ಗ್ವಾಲಿಯರ್‌ನ ಆಗ್ನೇಯಕ್ಕೆ 28 ಕಿಮೀ ದೂರದಲ್ಲಿದೆ. ಭೂಕಂಪದಿಂದಾದ ಹಾನಿಯ ಬಗ್ಗೆ ಇನ್ನೂ ಯಾವುದೇ ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಣಿಪುರದ ಮೊಯಿರಾಂಗ್‌ನಲ್ಲಿ ಶುಕ್ರವಾರ ಬೆಳಿಗ್ಗೆ 08:52 ಕ್ಕೆ ಭೂಮಿಯಿಂದ 51 ಕಿಮೀ ಆಳದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ.