Sunday, 15th December 2024

ಜ್ಞಾನವಾಪಿ ಮಸೀದಿ: ಇಂದು ಅರ್ಜಿ ವಿಚಾರಣೆ

ವದೆಹಲಿ: ವಾರಾಣಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣಕ್ಕೆ ಸಂಬಂಧಿಸಿದ ವಿವಾ ದದ ಕುರಿತು ಭಾರತದ ಸುಪ್ರೀಂ ಕೋರ್ಟ್ ಗುರುವಾರ ಅರ್ಜಿ ವಿಚಾರಣೆ ನಡೆಸಲಿದೆ.

ಜ್ಞಾನವಾಪಿ ಮಸೀದಿಯೊಳಗೆ ಸರ್ವೆ ಮಾಡುವ ಸಮಯದಲ್ಲಿ ‘ಶಿವಲಿಂಗ’ ಪತ್ತೆ ಯಾಗಿತ್ತು ಎನ್ನಲಾಗಿತ್ತು. ಸುಪ್ರೀಂ ಕೋರ್ಟ್​ ಮುಖ್ಯ ನ್ಯಾಯಮೂರ್ತಿಗಳಾದ ಡಿ.ವೈ ಚಂದ್ರಚೂಡ್ ಮತ್ತು ಹಿಮಾ ಕೊಹ್ಲಿ ಅವರ ಪೀಠ ವಿಚಾರಣೆ ನಡೆಸಲಿದೆ.

ಮೇ 20ರಂದು ಸುಪ್ರೀಂ ಕೋರ್ಟ್​ ಜ್ಞಾನವಾಪಿ ಮಸೀದಿಯ ಮೇಲೆ ಹಿಂದೂ ಭಕ್ತರು ಸಲ್ಲಿಸಿದ ಸಿವಿಲ್ ಮೊಕದ್ದಮೆಯನ್ನು ಸಿವಿಲ್ ನ್ಯಾಯಾಧೀಶರಿಂದ (ಹಿರಿಯ ವಿಭಾಗ) ವಾರಾಣಸಿಯ ಜಿಲ್ಲಾ ನ್ಯಾಯಾಧೀಶರಿಗೆ ವರ್ಗಾಯಿಸಿತ್ತು.

1991ರ ಕಾನೂನಿನಿಂದ ಸಿವಿಲ್ ಮೊಕದ್ದಮೆಯನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ ಮಸೀದಿ ಸಮಿತಿಯು ಸಲ್ಲಿಸಿದ ಸಿವಿಲ್ ಪ್ರೊಸೀಜರ್ ಕೋಡ್ ಆದೇಶ 7 ನಿಯಮ 11ರ ಅಡಿಯಲ್ಲಿ ಅರ್ಜಿಯ ಆದ್ಯತೆಯನ್ನು ನಿರ್ಧರಿಸಲು ಜಿಲ್ಲಾ ನ್ಯಾಯಾಧೀಶರಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.