Friday, 22nd November 2024

ಜ್ಞಾನವಾಪಿ ಮಸೀದಿ: ವಿಚಾರಣೆ ಮೇ.26ಕ್ಕೆ ಮುಂದೂಡಿಕೆ

ವಾರಣಾಸಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಕೋರ್ಟ್ ವಿಚಾರಣೆ ಯನ್ನು ಮೇ 26ಕ್ಕೆ ಮುಂದೂಡಿದೆ.

ಮಂಗಳವಾರ ಅರ್ಜಿಯ ವಾದ, ವಿವಾದ ಆಲಿಸಿದ ಕೋರ್ಟ್ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದು ಮೇ.26ರವರೆಗೆ ಯಥಾಸ್ಥಿತಿ ಕಾಪಾಡುವಂತೆ ಕೋರ್ಟ್ ಆದೇಶಿಸಿದೆ.

ಹಿಂದೂಗಳು ಸಲ್ಲಿಸಿರುವ ಅರ್ಜಿಯ ಸಿಂಧುತ್ವದ ಬಗ್ಗೆ ಮೇಲೆ 26ರಂದು ವಿಚಾರಣೆ ಆರಂಭಿಸಲಿದೆ. ಅಂದು ಅರ್ಜಿಯು ವಿಚಾರಣೆಗೆ ಯೋಗ್ಯವೇ ಅಲ್ಲವೆ ಎಂಬುವದನ್ನು ಪರಿಗಣಿಸಲಾಗುತ್ತದೆ. ಇನ್ನು ಸುಪ್ರೀಂ ಕೋರ್ಟ್ ಸಹ ಅರ್ಜಿಯು ವಿಚಾರಣೆಗೆ ಸೂಕ್ತವೇ ಎಂಬುದನ್ನು ಮೊದಲು ಪರಿಗಣಿಸುವಂತೆ ಸೂಚಿಸಿತ್ತು.

ಇಂದು ತೀರ್ಪು ನೀಡುವುದಾಗಿ ಘೋಷಿಸಿದ್ದ ಜಿಲ್ಲಾ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ. ಸರ್ವೇ ವರದಿಯನ್ನು ನೀಡು ವಂತೆ ವಕೀಲರು ಕೇಳಿದ್ದರಿಂದ ಎರಡು ಕಡೆಯವರಿಗೆ ಸರ್ವೇ ವರದಿ ನೀಡಲು ಕೋರ್ಟ್ ಆದೇಶಿಸಿದ್ದು ಆಕ್ಷೇಪಣೆ ಸಲ್ಲಿಸಲು 7 ದಿನಗಳ ಕಾಲಾವಕಾಶ ನೀಡಿದೆ.