Sunday, 24th November 2024

Hair Care Tips: ಟೊಮೆಟೊವನ್ನು ಈ ರೀತಿ ಬಳಸಿ; ಕೂದಲು ಉದುರುವುದನ್ನು ನಿಲ್ಲಿಸಿ!

Hair Care Tips

ಟೊಮೆಟೊ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಈ ಟೊಮೆಟೊ ಚರ್ಮದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ  ಕೂದಲಿನ ಆರೈಕೆಗಾಗಿ ಟೊಮೆಟೊವನ್ನು ಬಳಸುವುದರಿಂದ ಹೊಳೆಯುವ ಕೂದಲನ್ನು ಪಡೆಯಬಹುದು. ವಿಟಮಿನ್ ಎ, ಸಿ ಮತ್ತು ಕೆ ಮತ್ತು ಲೈಕೋಪೀನ್ ನಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುವ ಟೊಮೆಟೊ  ಕೂದಲಿಗೆ(Hair Care Tips) ಅಸಂಖ್ಯಾತ ಪ್ರಯೋಜನಗಳನ್ನು ನೀಡುತ್ತದೆ. ಹಾಗಾದ್ರೆ ಟೊಮೆಟೊಗಳನ್ನು ಕೂದಲಿನ ಆರೈಕೆಗೆ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ತಿಳಿಯಿರಿ.

ಟೊಮೆಟೊದಿಂದ ಕೂದಲಿಗಾಗುವ ಪ್ರಯೋಜನಗಳು:

ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ಟೊಮೆಟೊ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ, ಇದು ನೆತ್ತಿಯನ್ನು ಪೋಷಿಸುತ್ತದೆ. ಟೊಮೆಟೊದಲ್ಲಿ ಕಂಡುಬರುವ ವಿಟಮಿನ್ ಎ, ಸೆಬಮ್ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ, ಇದು ನೆತ್ತಿಯನ್ನು ತೇವಾಂಶದಿಂದ ಇರಿಸುತ್ತದೆ ಮತ್ತು ಶುಷ್ಕತೆಯನ್ನು ತಡೆಯುತ್ತದೆ.

ತಲೆಹೊಟ್ಟನ್ನು ದೂರವಿಡುತ್ತದೆ
ಟೊಮೆಟೊದಲ್ಲಿರುವ  ಆಮ್ಲೀಯತೆಯು ತಲೆಹೊಟ್ಟಿಗೆ ಕಾರಣವಾಗುವ  ಶಿಲೀಂಧ್ರದ ಬೆಳವಣಿಗೆಯನ್ನು ತಡೆಯುತ್ತದೆ. ಇದರಿಂದ ನೆತ್ತಿ ತೇವಾಂಶದಿಂದ ಕೂಡಿರುತ್ತದೆ. ಹೊಟ್ಟಿನ ಸಮಸ್ಯೆ ಕಾಡುವುದಿಲ್ಲ.

ಕೂದಲು ಉದುರುವುದನ್ನು ತಡೆಯುತ್ತದೆ
ಲೈಕೋಪೀನ್‍ನಂತಹ ಆ್ಯಂಟಿ ಆಕ್ಸಿಡೆಂಟ್‍ಗಳಿಂದ ಸಮೃದ್ಧವಾಗಿರುವ ಟೊಮೆಟೊಗಳು ಆಕ್ಸಿಡೇಟಿವ್ ಒತ್ತಡದಿಂದ ಕೂದಲನ್ನು ಹಾನಿಗೊಳಗಾಗುವುದು ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಅಕಾಲಿಕ ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯುತ್ತದೆ
ಟೊಮೆಟೊದಲ್ಲಿರುವ ಪ್ರಬಲ ಆ್ಯಂಟಿ ಆಕ್ಸಿಡೆಂಟ್‍ಗಳಾದ ಲೈಕೋಪೀನ್, ಕೂದಲಿನ ಶಾಫ್ಟ್ ಅನ್ನು ಹಾನಿಗೊಳಿಸುವ ಮತ್ತು ಅಕಾಲಿಕ ಬೂದು ಬಣ್ಣಕ್ಕೆ ಕಾರಣವಾಗುವ ಹಾನಿಕಾರಕ ಫ್ರೀ ರಾಡಿಕಲ್‍ಗಳನ್ನು ತಟಸ್ಥಗೊಳಿಸಲು ಸಹಾಯ ಮಾಡುತ್ತದೆ.

Hair Care Tips

ಟೊಮೆಟೊವನ್ನು ಕೂದಲಿಗೆ ಬಳಸುವ ವಿಧಾನ:

ಟೊಮೆಟೊ ಮತ್ತು ಮೊಸರು ಹೇರ್ ಮಾಸ್ಕ್
ಟೊಮೆಟೊ ಪೇಸ್ಟ್‌ ಅನ್ನು ಮೊಸರಿನೊಂದಿಗೆ ಬೆರೆಸಿ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ, 20-30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ. ಈ ಮಾಸ್ಕ್ ನಿಮ್ಮ ಕೂದಲನ್ನು ಪೋಷಿಸಲು ಮತ್ತು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ, ಶುಷ್ಕತೆ ಮತ್ತು ಫ್ರಿಜ್ ಅನ್ನು ಕಡಿಮೆ ಮಾಡುತ್ತದೆ.

ಟೊಮೆಟೊ ಮತ್ತು ಜೇನುತುಪ್ಪದ ಹೇರ್ ಮಾಸ್ಕ್
ಟೊಮೆಟೊ ಪೇಸ್ಟ್‌ ಅನ್ನು ಜೇನುತುಪ್ಪದೊಂದಿಗೆ ಬೆರೆಸಿ ದಪ್ಪ ಪೇಸ್ಟ್ ಮಾಡಿ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ, 20-30 ನಿಮಿಷಗಳ ಕಾಲ ಬಿಡಿ, ನಂತರ ತೊಳೆಯಿರಿ.ಈ ಮಾಸ್ಕ್ ನಿಮ್ಮ ಕೂದಲು ಆರೋಗ್ಯಕರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ:ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕೆ? ಹಾಗಾದ್ರೆ ತಪ್ಪದೇ ಕುಡಿಸಿ ಈ ಪಾನೀಯ

ಟೊಮೆಟೊ ಮತ್ತು ನಿಂಬೆ ರಸ ಹೇರ್ ಮಾಸ್ಕ್
ಟೊಮೆಟೊ ಪೇಸ್ಟ್‌ ಅನ್ನು ತಾಜಾ ನಿಂಬೆ ರಸದೊಂದಿಗೆ ಮಿಶ್ರಣ ಮಾಡಿ. ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿ, 15-20 ನಿಮಿಷಗಳ ಕಾಲ ಬಿಡಿ, ನಂತರ ಚೆನ್ನಾಗಿ ತೊಳೆಯಿರಿ. ಇದು ತಲೆಹೊಟ್ಟನ್ನು ಕಡಿಮೆ ಮಾಡುತ್ತದೆ.