Friday, 22nd November 2024

Hair Care Tips: ನೀಳವಾದ ಕೇಶರಾಶಿ ನಿಮ್ಮದಾಗಬೇಕೆಂದರೆ ಈ ಹೂವುಗಳನ್ನು ಬಳಸಿ ನೋಡಿ!

Hair Care Tips

ಪ್ರತಿಯೊಬ್ಬರೂ ಮನೆಯ ಮುಂದೆ ಹೂದೋಟವನ್ನು ಮಾಡುತ್ತಾರೆ. ಹೂ ಅರಳುವುದು ನೋಡುವುದೇ ಕಣ್ಣಿಗೆ ಹಬ್ಬ. ಆದರೆ ಈ ಹೂಗಳನ್ನು ಬಳಸಿ  ನಿಮ್ಮ ಕೂದಲಿನ ಸೌಂದರ್ಯವನ್ನು ಸಹ ಹೆಚ್ಚಿಸಿಕೊಳ್ಳಬಹುದು ಎಂಬುದು ಗೊತ್ತೇ? ಹೌದು ಹೂಗಳು ಕೂದಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಕೂದಲಿನ ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಅವುಗಳಲ್ಲಿರುವ ನೈಸರ್ಗಿಕ ಪದಾರ್ಥಗಳು ಕೂದಲನ್ನು ಪೋಷಿಸುತ್ತದೆ ಮತ್ತು ಬಲಪಡಿಸುತ್ತದೆ. ಕೂದಲನ್ನು ಕಪ್ಪು, ದಟ್ಟ, ಉದ್ದ ಮತ್ತು ಹೊಳೆಯುವಂತೆ ಮಾಡುತ್ತದೆ. ಹಾಗಾದ್ರೆ ಕೂದಲಿಗೆ(Hair Care Tips) ಯಾವ ಹೂವುಗಳು ಪ್ರಯೋಜನಕಾರಿ ಮತ್ತು ಅವುಗಳನ್ನು ಹೇಗೆ ಬಳಸುವುದು ಎಂದು ತಿಳಿಯೋಣ.

ದಾಸವಾಳದ ಹೂವುಗಳು
ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಈ ಹೂವು ತುಂಬಾ ಪರಿಣಾಮಕಾರಿಯಾಗಿದೆ. ದಾಸವಾಳದ ಹೂವುಗಳು ಮತ್ತು ಎಲೆಗಳನ್ನು ಪೇಸ್ಟ್ ಮಾಡಿ ಕೂದಲಿನ ಬೇರುಗಳಿಗೆ ಹಚ್ಚಿ. 30 ನಿಮಿಷಗಳ ನಂತರ ಸಾಮಾನ್ಯ ನೀರಿನಿಂದ ತೊಳೆಯಿರಿ. ದಾಸವಾಳದ ಎಣ್ಣೆಯು ನೆತ್ತಿಯ ಮಸಾಜ್ ಮಾಡಲು ಸಹ ಉಪಯುಕ್ತವಾಗಿದೆ.

ಗುಲಾಬಿಗಳು
ರೋಸ್ ವಾಟರ್ ಕೂದಲಿಗೆ ತೇವಾಂಶವನ್ನು ಒದಗಿಸುವ ಹೈಡ್ರೇಟಿಂಗ್ ಗುಣಗಳನ್ನು ಹೊಂದಿದೆ. ಇದನ್ನು ಕೂದಲಿಗೆ ಸ್ಪ್ರೇ ಆಗಿ ಬಳಸಬಹುದು. ಇದು ನೆತ್ತಿಯನ್ನು ತಾಜಾವಾಗಿಡುತ್ತದೆ ಮತ್ತು ನೈಸರ್ಗಿಕ ರೀತಿಯಲ್ಲಿ ಕೂದಲನ್ನು ಮೃದುವಾಗಿಸುತ್ತದೆ.

ಮಲ್ಲಿಗೆ ಹೂ
ಮಲ್ಲಿಗೆ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಮಾಯಿಶ್ಚರೈಸಿಂಗ್ ಗುಣಗಳು ಸಮೃದ್ಧವಾಗಿವೆ. ಇದು ಕೂದಲನ್ನು ಬಲಪಡಿಸುತ್ತದೆ. ಇದನ್ನು ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಿ.

ಲ್ಯಾವೆಂಡರ್ ಹೂ
ಲ್ಯಾವೆಂಡರ್ ಹೂಗಳು ಪರಿಮಳಯುಕ್ತವಾಗಿದ್ದು, ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಮತ್ತು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಲ್ಯಾವೆಂಡರ್ ಎಣ್ಣೆಯನ್ನು ಆಲಿವ್ ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ವಾರಕ್ಕೊಮ್ಮೆ ಮಸಾಜ್ ಮಾಡಿ.

ಮಾರಿಗೋಲ್ಡ್ ಹೂ
ಒಣಗಿದ ಮತ್ತು ಹಾನಿಗೊಳಗಾದ ಕೂದಲಿಗೆ ಮಾರಿಗೋಲ್ಡ್ ಹೂವು ಉತ್ತಮವಾಗಿದೆ. ಬಾದಾಮಿ, ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ  ಸ್ವಚ್ಛಗೊಳಿಸಿದ ಚೆಂಡು ಹೂವಿನ ದಳಗಳನ್ನು ಸೇರಿಸಿ ಕುದಿಸಿ ತಣ್ಣಗಾಗಿಸಿ  ನಂತರ ಫಿಲ್ಟರ್ ಮಾಡಿ ಬಳಸಿ.

ರೋಸ್ಮರಿ ಹೂ
ರೋಸ್ಮರಿ ಹೂವಿನಿಂದ ತಯಾರಿಸಿದ ಎಣ್ಣೆ ಕೂದಲಿನ ಬೇರುಗಳನ್ನು ಬಲಪಡಿಸುತ್ತದೆ. ಇದನ್ನು ಆಲಿವ್ ಎಣ್ಣೆಯೊಂದಿಗೆ ಬೆರೆಸಿ ಕೆಲವು ಗಂಟೆಗಳ ನಂತರ ತೊಳೆಯಿರಿ.

ಕಮಲದ ಹೂ
ಕಮಲದ ಹೂವಿನ ಪೇಸ್ಟ್ ಕೂದಲಿಗೆ ತೇವಾಂಶವನ್ನು ನೀಡುತ್ತದೆ. ಇದನ್ನು ಪೇಸ್ಟ್ ಮಾಡಿ ತಲೆಬುರುಡೆಗೆ ಹಚ್ಚಿಕೊಳ್ಳಿ. ಇದು ಕೂದಲು ಒಡೆಯುವುದನ್ನು ತಡೆಯುತ್ತದೆ.

ಇದನ್ನೂ ಓದಿ:ಗರ್ಭಿಣಿಯರೇ, ಈ 5 ಸಮಸ್ಯೆಗಳಿದ್ದಾಗ ದೈಹಿಕ ಸಂಬಂಧ ಬೆಳೆಸಬೇಡಿ!

ಈ ರೀತಿಯಲ್ಲಿ ಹೂಗಳನ್ನು ಬಳಸಿ ಕೂಡ ನಿಮ್ಮ ಕೂದಲಿನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ.