ಡಿಸ್ಪುರ್ : ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ವೀಕ್ಷಿಸಲು ಸರ್ಕಾರಿ ನೌಕರರಿಗೆ ಅರ್ಧ ದಿನ ರಜೆಯನ್ನು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಘೋಷಣೆ ಮಾಡಿದ್ದಾರೆ.
1990ರ ದಶಕದಲ್ಲಿ ಕಾಶ್ಮೀರಿ ಪಂಡಿತರನ್ನು ಬಲವಂತವಾಗಿ ಹೇಗೆ ಕಾಶ್ಮೀರ ದಿಂದ ಕಳುಹಿಸಲಾಯಿತು ಎಂಬುದು ಸಿನೆಮಾ ಕಥೆಯಾಗಿದ್ದು, ಈ ಹಿನ್ನೆಲೆ ಯಲ್ಲಿ ಹಿಮಂತ ಬಿಸ್ವಾ ಶರ್ಮಾ ಅವರು, ನಮ್ಮ ಸರ್ಕಾರಿ ನೌಕರರು ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾ ವೀಕ್ಷಿಸಲು ಅರ್ಧ ದಿನದ ವಿಶೇಷ ರಜೆಗೆ ಕೊಡಲಾ ಗುತ್ತಿದೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡ ಮತ್ತು ಅವರನ್ನು ಓಡಿಸಿರುವ ರೀತಿ ಮಾನವೀಯತೆಯ ಮೇಲೆ ಕಳಂಕವಾಗಿದೆ. ‘ದಿ ಕಾಶ್ಮೀರ್ ಫೈಲ್ಸ್’ ಜನರ ದುಸ್ಥಿತಿಯನ್ನು ಹೃದಯಕ್ಕೆ ಮುಟ್ಟುವಂತೆ ಚಿತ್ರಿಸಲಾಗಿದೆ. ನಾನು ನನ್ನ ಕ್ಯಾಬಿನೆಟ್ ಸಹೋದ್ಯೋಗಿ ಗಳು ಮತ್ತು ಮಿತ್ರಪಕ್ಷಗಳ ಶಾಸಕರೊಂದಿಗೆ ವೀಕ್ಷಿಸಿದ್ದೇನೆ ಎಂದು ಸಿನಿಮಾ ವೀಕ್ಷಿಸಿದ ನಂತರ ಟ್ವೀಟ್ ಮಾಡಿದ್ದಾರೆ.