Thursday, 19th September 2024

ಹತ್ರಾಸ್‌ನಲ್ಲಿ ಭೀಕರ ರಸ್ತೆ ಅಪಘಾತ

ಹತ್ರಾಸ್: ಟ್ರ್ಯಾಕ್ಟರ್​ ಟ್ರಾಲಿ ಮತ್ತು ಡಂಪರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಟ್ರ್ಯಾಕ್ಟರ್‌ನಲ್ಲಿ ಪ್ರಯಾಣಿ ಸುತ್ತಿದ್ದ ಐವರು ಸಾವನ್ನಪ್ಪಿದ್ದಾರೆ. ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಈ ದುರ್ಘಟನೆ ನಡೆದಿದೆ.

ಮೃತರನ್ನು ಕಾಸ್ಗಂಜ್‌ನ ಅಮಾಪುರದ ವಿಕ್ರಮ್, ಜಲೇಸರ್‌ನ ಗಧಿಯಾ ಸಕ್ರೌಲಿಯ ಮಾಧುರಿ(22), ವಜೀರ್‌ ಪುರ ಕೋಟ್ಲಾ ಫಿರೋಜಾಬಾದ್‌ನ ಹೇಮಲತಾ(12), ಗಧಿಯಾ ಸಕ್ರೌಲಿಯ ಲಕ್ಷ್ಮಿ(18) ಮತ್ತು ಅಭಿಷೇಕ್ (20) ಎಂದು ಗುರುತಿಸಲಾಗಿದೆ. ಅವಘಡದಲ್ಲಿ ಸುಮಾರು 16 ಮಂದಿ ಗಾಯಗೊಂಡಿ ದ್ದಾರೆ. ಗಾಯ ಗೊಂಡವರಲ್ಲಿ 6 ಮಂದಿಯನ್ನು ಆಗ್ರಾ ವೈದ್ಯಕೀಯ ಕಾಲೇಜಿಗೆ ಮತ್ತು ಒಬ್ಬರನ್ನು ಅಲಿಗಢ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಇಟಾಹ್ ಜಿಲ್ಲೆಯ ಜಲೇಸರ್‌ನಿಂದ ಸುಮಾರು 50ರಿಂದ 60 ಮಂದಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಗೋವರ್ಧನ್ ಪರಿಕ್ರಮಕ್ಕೆ ತೆರಳಿದ್ದರು. ಇವರಲ್ಲಿ ಒಂದೇ ಕುಟುಂಬ ದವರು ಇದ್ದರು. ಟ್ರ್ಯಾಕ್ಟರ್ ಸಹಾಪೌ ಕೊಟ್ವಾಲಿ ಪ್ರದೇಶದ ಸದಾಬಾದ್ ರಸ್ತೆಯಲ್ಲಿದ್ದಾಗ, ಮುಂಭಾಗದಿಂದ ಬರುತ್ತಿದ್ದ ಡಂಪರ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಮಥುರಾ ಜಿಲ್ಲೆಯಲ್ಲಿ ಸುಮಾರು 50 ರಿಂದ 60 ಜನರು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಗೋವರ್ಧನ ಪರಿಕ್ರಮ ಮಾಡಲು ಹೋಗುತ್ತಿದ್ದರು. ಸಹಾಪೌ ಪ್ರದೇಶದಲ್ಲಿ ಡಂಪರ್‌ಗೆ ಡಿಕ್ಕಿ ಹೊಡೆದು ಈ ಭೀಕರ ಸಾವು ನೋವು ಸಂಭವಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿದೆ. 13 ಗಾಯಾಳುಗಳಿಗೆ ಸದಾಬಾದ್‌ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸಹಪೌ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಮಾಹಿತಿ ನೀಡಿದ್ದಾರೆ.

ರಸ್ತೆ ಅಪಘಾತದ ಮಾಹಿತಿ ಮೇರೆಗೆ ಪೊಲೀಸ್ ವರಿಷ್ಠಾಧಿಕಾರಿ ದೇವೇಶ್ ಕುಮಾರ್ ಪಾಂಡೆ, ಸಿಒ ಗೋಪಾಲ್ ಸಿಂಗ್, ಉಪ ಜಿಲ್ಲಾಧಿಕಾರಿ ಸದಾಬಾದ್ ಸಂಜಯ್ ಕುಮಾರ್, ತಹಶೀಲ್ದಾರ್ ಅನಿಲ್ ಕುಮಾರ್, ನಾಯಬ್ ತಹಶೀಲ್ದಾರ್ ಸತ್ಯೇಂದ್ರ ಚೌಧರಿ ಮತ್ತು ಇತರ ಅಧಿಕಾರಿಗಳು ಸದಾಬಾದ್‌ನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು.

Leave a Reply

Your email address will not be published. Required fields are marked *