Thursday, 12th December 2024

ದೆಹಲಿ ಬಂಗಲೆ ಖಾಲಿ ಮಾಡಿ: ಸ್ವಾಮಿಗೆ ಹೈಕೋರ್ಟ್ ನಿರ್ದೇಶನ

ವದೆಹಲಿ: ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ತಮ್ಮ ದೆಹಲಿ ಬಂಗಲೆಯನ್ನು ಆರು ವಾರಗಳಲ್ಲಿ ಎಸ್ಟೇಟ್ ಅಧಿಕಾರಿಗೆ ಹಸ್ತಾಂತರಿಸು ವಂತೆ ದೆಹಲಿ ಹೈಕೋರ್ಟ್ ಬುಧವಾರ ನಿರ್ದೇಶಿಸಿದೆ.

2016 ರ ಜನವರಿಯಿಂದ ತಮ್ಮ ಬಂಗಲೆಯನ್ನು ಮರು ಹಂಚಿಕೆ ಮಾಡುವಂತೆ ಕೋರಿ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಏಕಸದಸ್ಯ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ವಿಲೇವಾರಿ ಮಾಡಿದರು.

‘ನ್ಯಾಯಾಲಯವು ಹಂಚಿಕೆಯನ್ನು ಐದು ವರ್ಷಗಳವರೆಗೆ ಮಾಡಲಾಗಿದೆ ಮತ್ತು ಆ ಅವಧಿ ಮುಗಿದಿದೆ ಎಂದು ಉಲ್ಲೇಖಿಸಿದೆ. ಝಡ್ ವರ್ಗದ ಸಂರಕ್ಷಕರಿಗೆ ಸರ್ಕಾರಿ ವಸತಿ ಯನ್ನು ಮಂಜೂರು ಮಾಡುವ ಅಥವಾ ಅಗತ್ಯವಿರುವ ಯಾವುದೇ ವಿಷಯವನ್ನು ನ್ಯಾಯಾಲಯಕ್ಕೆ ತೋರಿಸಲಾಗಿಲ್ಲ’ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

2016 ರ ಜನವರಿಯಲ್ಲಿ ಸ್ವಾಮಿ ಅವರಿಗೆ ಕೇಂದ್ರವು 5 ವರ್ಷಗಳ ಕಾಲ ದೆಹಲಿಯಲ್ಲಿ ಬಂಗಲೆಯನ್ನು ಮಂಜೂರು ಮಾಡಿತ್ತು.