Wednesday, 13th November 2024

Health Tips: ಸ್ನಾನ ಮಾಡುವಾಗ ಮೂತ್ರ ವಿಸರ್ಜಿಸುವ ಅಭ್ಯಾಸ ಇದ್ದರೆ ತಕ್ಷಣ ಬಿಟ್ಟು ಬಿಡಿ!

Health Tips

ಸ್ನಾನ (Bath) ಮಾಡುವಾಗ ಕೆಲವರಿಗೆ ಮೂತ್ರ (urination) ಮಾಡುವ ಅಭ್ಯಾಸವಿರುತ್ತದೆ. ಇದು ಆರೋಗ್ಯಕರವೇ (Health Tips) ಎಂಬುದನ್ನು ಯಾರೊಂದಿಗೂ ಚರ್ಚಿಸಲು ಆಗುವುದಿಲ್ಲ. ಇದು ಸಮಸ್ಯೆಯಲ್ಲ ಎಂದೆನಿಸಬಹುದು. ಆದರೆ ಇದು ಮುಂದೊಂದು ದಿನ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

ಕೆಲವರು ಸ್ನಾನ ಮಾಡುವಾಗ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದು ಎಂದರೆ ಇನ್ನು ಕೆಲವರು ಒಳ್ಳೆಯದಲ್ಲ ಎನ್ನುತ್ತಾರೆ. ಈ ಕುರಿತು ಹಿರಿಯ ಸ್ತ್ರೀ ರೋಗ ತಜ್ಞೆ ಡಾ. ಶೈಲಿ ಶರ್ಮಾ ಹೇಳುವುದು ಹೀಗೆ..

Health Tips

ಸ್ನಾನ ಮಾಡುವಾಗ ಅದರಲ್ಲೂ ಮುಖ್ಯವಾಗಿ ಮಹಿಳೆಯರು ಸ್ನಾನದ ವೇಳೆ ಮೂತ್ರ ವಿಸರ್ಜನೆ ಮಾಡುವುದು ಒಳ್ಳೆಯದಲ್ಲ ಎನ್ನುತ್ತಾರೆ‌ ಅವರು. ಯಾಕೆಂದರೆ ಇದು ಮೂತ್ರಕೋಶದ ಅಡಿಯಲ್ಲಿರುವ ಪೆಲ್ವಿಕೆ ಫ್ಲೋರ್ ಸ್ನಾಯುಗಳನ್ನು ಮೊದಲೇ ಬಿಗಿಗೊಳಿಸಬಹುದು. ಪರಿಣಾಮವಾಗಿ ಮೂತ್ರಕೋಶವು ಸಂಪೂರ್ಣವಾಗಿ ಖಾಲಿಯಾಗುವುದಿಲ್ಲ.

ಇದರಿಂದ ಮೂತ್ರ ಪೂರ್ತಿಯಾಗಿ ವಿಸರ್ಜನೆಯಾಗದೆ ಸೋಂಕು ಉಂಟಾಗಬಹುದು. ಮೂತ್ರಕೋಶದ ಕಲ್ಲುಗಳು ಮತ್ತು ಮೂತ್ರ ಪಿಂಡದ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು ಎನ್ನುತ್ತಾರೆ ಅವರು.

ಕೆಲವು ಸಂಶೋಧಕರು ಸ್ನಾನದ ಸಮಯದಲ್ಲಿ ಮೂತ್ರ ವಿಸರ್ಜಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎನ್ನುತ್ತಾರೆ. ಎಲೆಕ್ಟ್ರೋಲೈಟ್ ಮತ್ತು ಯೂರಿಯಾದಂತಹ ಅಂಶಗಳು ಮೂತ್ರದಲ್ಲಿದ್ದು, ಇದು ಸ್ನಾನ ಮಾಡುವಾಗ ವಿಸರ್ಜನೆಯಾದರೆ ಯಾವುದೇ ಸೋಂಕು ಅಥವಾ ರೋಗಗಳನ್ನು ಹರಡುವ ಸಾಧ್ಯತೆ ಕಡಿಮೆ ಎನ್ನುತ್ತಾರೆ.

Weight Loss: ತೂಕ ಇಳಿಸಿಕೊಳ್ಳಬೇಕೆ? ಖರ್ಜೂರ ಸೇವಿಸಿ ನೋಡಿ!

ಮೂತ್ರನಾಳದ ಸೋಂಕಿನಿಂದ ಬಳಲುವವರು ಸ್ನಾನದ ಸಮಯದಲ್ಲಿ ಮೂತ್ರ ವಿಸರ್ಜನೆ ಮಾಡುವುದರಿಂದ ಕೆಲವು ಬ್ಯಾಕ್ಟೀರಿಯಾಗಳು ಸೋಂಕು ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವೂ ಇದೆ. ಸುಖಾಸುಮ್ಮನೆ ಯಾಕೆ ರಿಸ್ಕ್? ಸ್ನಾನ ಮಾಡುತ್ತಿರುವಾಗಲೇ ಮೂತ್ರ ವಿಸರ್ಜಿಸುವ ಅಭ್ಯಾಸ ಬಿಟ್ಟು ಬಿಡಿ!