Saturday, 23rd November 2024

Healthy Food: ರುಚಿಕರವಾದ ಆಲೂ ಚನಾ ಕರಿ ಮಾಡುವುದು ಹೇಗೆ? ಇಲ್ಲಿದೆ ಸರಳ ವಿಧಾನ

Healthy Food

ಸಂಜೆಯ ತಿಂಡಿ, ಬೆಳಗಿನ ಉಪಾಹಾರಕ್ಕೆ ಏನು ಮಾಡುವುದು ಎನ್ನುವುದು ಎಲ್ಲರ ಚಿಂತೆ. ಹೆಚ್ಚಿನವರಿಗೆ ಏನು ತಿನ್ನಬೇಕು ಅಥವಾ ಏನು ಮಾಡಬಾರದು ಎನ್ನುವುದು ಅರ್ಥವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬೆಳಗ್ಗಿನ ತಿಂಡಿ, ಸಂಜೆಯ ಸ್ನಾಕ್ ಜೊತೆಗೆ ಆಲೂ ಚನಾ ಕರಿ (Aloo Chana curry) ಮಾಡಲು ಪ್ರಯತ್ನಿಸಿ. ಇದರ ವಿಶಿಷ್ಟತೆಯೆಂದರೆ ಇದು ರುಚಿಕರ ಮತ್ತು ಆರೋಗ್ಯಕರವೂ (Healthy Food) ಹೌದು.

ಕಪ್ಪು ಕಡಲೆಯು ಪ್ರೋಟೀನ್‌ನ ಅತ್ಯುತ್ತಮ ಮೂಲವಾಗಿದೆ. ಇದಕ್ಕಾಗಿಯೇ ಇದನ್ನು ಆಹಾರದಲ್ಲಿ ಸೇರಿಸುವುದು ಬಹುಮುಖ್ಯವಾಗಿದೆ. ಕಪ್ಪು ಕಡಲೆ ಮತ್ತು ಆಲೂಗಡ್ಡೆ ಕರಿ ಮಾಡುವುದು ಅತ್ಯಂತ ಸುಲಭ.

ಬೇಕಾಗುವ ಸಾಮಗ್ರಿಗಳು

ಕಪ್ಪು ಕಡಲೆ 250 ಗ್ರಾಮ್, ನಾಲ್ಕು ದೊಡ್ಡ ಗಾತ್ರದ ಆಲೂಗಡ್ಡೆ, ನಾಲ್ಕು ದೊಡ್ಡ ಗಾತ್ರದ ಈರುಳ್ಳಿ, ಒಂದು ಇಂಚಿನ ಶುಂಠಿ, ಬೆಳ್ಳುಳ್ಳಿ 8 ರಿಂದ 10 ಎಸಳು, ಕತ್ತರಿಸಿದ ಕೊತ್ತಂಬರಿ ಸೊಪ್ಪು 2- 3 ಚಮಚ, ಅರಶಿನ ಒಂದು ಚಮಚ, ಕೆಂಪು ಮೆಣಸಿನ ಹುಡಿ ಅರ್ಧ ಚಮಚ, ಕೊತ್ತಂಬರಿ ಹುಡಿ ಎರಡು ಚಮಚ, ಕಾಶ್ಮೀರಿ ಕೆಂಪು ಮೆಣಸಿನ ಹುಡಿ ಎರಡು ಚಮಚ, ಹಸಿ ಮೆಣಸು 2 ರಿಂದ 3, ಟೊಮೇಟೊ 4 ರಿಂದ 5, ತುಪ್ಪ ಎರಡು ಚಮಚ, ಸಾಸಿವೆ ಒಂದು ಚಮಚ, ಕಡಲೆ ಮಸಾಲಾ – 1 ಚಮಚ, ಅಗತ್ಯಕ್ಕೆ ತಕ್ಕುದಾಗಿ ಸಾಸಿವೆ ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

Healthy Food

ಮಾಡುವ ವಿಧಾನ

ಮಾಡುವ ವಿಧಾನ: ಆಲೂಗಡ್ಡೆ ಮತ್ತು ಕಪ್ಪು ಕಡಲೆ ಕರಿ ಮಾಡಲು ಮೊದಲು ಕಪ್ಪು ಕಡಲೆಯನ್ನು ಸುಮಾರು ಏಳೆಂಟು ಗಂಟೆಗಳ ಕಾಲ ನೆನೆಸಿಡಿ. ಅನಂತರ ಕಡಲೆ, ಆಲೂಗಡ್ಡೆಯನ್ನು ಕುಕ್ಕರ್‌ನಲ್ಲಿ ಹಾಕಿ. ಅದಕ್ಕೆ ಒಂದೆರಡು ಲವಂಗ ಹಾಕಿ. ಈಗ ಮುಚ್ಚಳವನ್ನು ಮುಚ್ಚಿ ಮಧ್ಯಮ ಉರಿಯಲ್ಲಿ 3 ರಿಂದ 4 ಸೀಟಿ ಬರುವವರೆಗೆ ಬೇಯಿಸಿ. ಬಳಿಕ ತಣಿಯಲು ಬಿಡಿ. ಸಿಟಿ ತೆಗೆದು ಒಂದು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದಿರಿಸಿ.

ಆಲೂಗಡ್ಡೆಯ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಸುಮಾರು ಎರಡು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ. ಟೊಮೆಟೊ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಒಟ್ಟಿಗೆ ರುಬ್ಬಿ ಪೇಸ್ಟ್ ಮಾಡಿ. ಅನಂತರ ಒಂದು ದೊಡ್ಡ ಪಾತ್ರೆಯಲ್ಲಿ ಸಾಸಿವೆ ಎಣ್ಣೆ ಹಾಕಿ ಕಡಲೆ, ಕತ್ತರಿಸಿದ ಆಲೂಗಡ್ಡೆ, ಈರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿ ಪೇಸ್ಟ್ ಅನ್ನು ಹಾಕಿ. ಇದಕ್ಕೆ ಮೇಲೆ ತಿಳಿಸಿರುವ ಎಲ್ಲಾ ಮಸಾಲೆಗಳನ್ನು ಸೇರಿಸಿ. ಈ ಮಿಶ್ರಣವನ್ನು ಚೆನ್ನಾಗಿ ಮಿಕ್ಸ್ ಮಾಡಿ. ಸ್ವಲ್ಪ ಸಮಯ ಬಿಡಿ.

ಬಳಿಕ ಕುಕ್ಕರ್ ಗ್ಯಾಸ್ ಮೇಲೆ ಇರಿಸಿ ಬಿಸಿಯಾದಾಗ ಎಣ್ಣೆ ಹಾಕುನ್ ಜೀರಿಗೆ ಸೇರಿಸಿ. ಅದಕ್ಕೆ ಕತ್ತರಿಸಿದ ಈರುಳ್ಳಿ ಬೆರೆಸಿ. ಸಂಪೂರ್ಣವಾಗಿ ಹುರಿಯಿರಿ. ಇದಕ್ಕೆ ಸುಮಾರು ಅರ್ಧ ಗ್ಲಾಸ್ ನೀರು ಹಾಕಿ ಮೊದಲೇ ಸಿದ್ದ ಪಡಿಸಿದ ಆಲೂಗಡ್ಡೆ ಮಿಶ್ರಣವನ್ನು ಸೇರಿಸಿ. ಜೊತೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ.

Healthy Drinks For Child: ನಿಮ್ಮ ಮಕ್ಕಳು ಆರೋಗ್ಯವಾಗಿರಬೇಕೆ? ಹಾಗಾದ್ರೆ ತಪ್ಪದೇ ಕುಡಿಸಿ ಈ ಪಾನೀಯ

ಅನಂತರ ಕುಕ್ಕರ್ ಅನ್ನು ಮುಚ್ಚಿ. 10 ನಿಮಿಷಗಳ ಕಾಲ ಬೇಯಲು ಬಿಡಿ. ನಡುವೆ ಮುಚ್ಚಳವನ್ನು ತೆಗೆದು ಪರೀಕ್ಷಿಸಿ. ಈರುಳ್ಳಿ ಸಂಪೂರ್ಣವಾಗಿ ಕರಗಿ ಕಂದು ಬಣ್ಣಕ್ಕೆ ತಿರುಗಿದಾಗ ನಾವು ಕಸೂರಿ ಮೇಥಿಯನ್ನೂ ಸೇರಿಸಿ. ಅಗತ್ಯವಿದ್ದರೆ ಗ್ರೇವಿ ಪ್ರಮಾಣಕ್ಕೆ ಅನುಗುಣವಾಗಿ ನೀರು ಸೇರಿಸಬಹುದು. ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿದರೆ ರುಚಿಕರವಾದ ಆಲೂ ಚೆನಾ ಕರಿ ಸವಿಯಲು ಸಿದ್ದ.