Thursday, 12th December 2024

Heart Attack: ಹೃದಯಾಘಾತಕ್ಕೆ ಒಳಗಾದ ಯುವಕ; ಸಿಪಿಆರ್ ಮೂಲಕ ಜೀವ ಉಳಿಸಿದ ಕಾನ್‌ಸ್ಟೇಬಲ್‌

Heart Attack

ವಾರಂಗಲ್: ವಿಜಯದಶಮಿಯ ದಿನ ಎಲ್ಲಾ ಕಡೆ ರಾವಣ ದಹನ ಕಾರ್ಯಕ್ರಮ ನಡೆಯುತ್ತದೆ. ರಾವಣನ ಪ್ರತಿಕೃತಿಯನ್ನು ಸುಡುವ ಮೂಲಕ ವಿಜಯದಶಮಿಯನ್ನು ಜನ ಸಡಗರದಿಂದ  ಆಚರಿಸುತ್ತಾರೆ. ಇಂತಹ ಶುಭ ಸಮಾರಂಭದಲ್ಲಿ ಇದ್ದಕ್ಕಿದ್ದಂತೆ ಅವಘಡವೊಂದು ಸಂಭವಿಸಿದೆ. ವಾರಂಗಲ್‍ನ ರಂಗಲೀಲಾ ಮೈದಾನದಲ್ಲಿ ನಡೆದ ರಾವಣ ದಹನ ಕಾರ್ಯಕ್ರಮದ ವೇಳೆ ಯುವಕನೊಬ್ಬ ಹೃದಯಾಘಾತದಿಂದ(Heart Attack) ಕುಸಿದು ಬಿದ್ದಿದ್ದಾನೆ. ಆಗ ಅಲ್ಲಿಗೆ ಬಂದ ಕಾನ್ಸ್ಟೇಬಲ್ ಸಿಪಿಆರ್‌ ವಿಧಾನದ ಮೂಲಕ ಯುವಕನ ಜೀವ ಉಳಿಸಿದ್ದಾರೆ.

ವಾರಂಗಲ್‍ನ ರಂಗಲೀಲಾ ಮೈದಾನದಲ್ಲಿ ರಾವಣ ದಹನ ಕಾರ್ಯಕ್ರಮದ ವೇಳೆ ಕಾಲ್ತುಳಿತದ  ಘಟನೆ ನಡೆದಿದ್ದು, ಆ ವೇಳೆ ಯುವಕನೊಬ್ಬ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ. ಆಗ ಅಲ್ಲಿದ್ದ ಕಾನ್‌ಸ್ಟೇಬಲ್ ತಕ್ಷಣ ಯುವಕನ ಬಳಿ ಬಂದು ಕೂಡಲೇ ಅವನಿಗೆ ಸಿಪಿಆರ್ ಮಾಡಿ ಜೀವ ಉಳಿಸಿದ್ದಾರೆ. ಕಾನ್ಸ್ಟೇಬಲ್‍ ತ್ವರಿತ ಕ್ರಮಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರಂಗಲ್‍ನಲ್ಲಿ ನಡೆದ ರಾವಣ ದಹನ ಸಮಾರಂಭದಲ್ಲಿ ಸುಮಾರು 2 ಲಕ್ಷ ಜನರು ಭಾಗವಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಂಗಲೀಲಾ ಮೈದಾನದಲ್ಲಿ ನಡೆದ ಈ ಉತ್ಸವದಲ್ಲಿ ವಾರಂಗಲ್ ಶಾಸಕಿ ಮತ್ತು ರಾಜ್ಯ ಸಚಿವ ಕೊಂಡಾ ಸುರೇಖಾ, ತೆಲಂಗಾಣ ವಿಧಾನ ಪರಿಷತ್ ಅಧ್ಯಕ್ಷ ಬಂಡಾ ಪ್ರಕಾಶ್ ಮತ್ತು ಇತರ ಗಣ್ಯರು ಭಾಗಿಯಾಗಿದ್ದರು.

ಇದನ್ನೂ ಓದಿ: ಕಾಳಿಂಗ ಸರ್ಪದ ಮಂಡೆಗೆ ಮುತ್ತಿಟ್ಟ ಯುವತಿ; ಎದೆ ಝಲ್ಲೆನ್ನುವ ವಿಡಿಯೊ ಇಲ್ಲಿದೆ…

ದಸರಾ ಉತ್ಸವದ ಅಂತ್ಯ, ಅಂದರೆ ವಿಜಯ ದಶಮಿಯ ದಿನ ಹಿಂದೂ ದೇವರಾದ ರಾಮನು ರಾವಣನ ಸಂಹರಿಸಿ ವಿಜಯ ಸಾಧಿಸಿದ್ದನ್ನು ಪ್ರತಿವರ್ಷ ಜನರು ಸಂಭ್ರಮದಿಂದ ಆಚರಿಸುತ್ತಾರೆ. ಆ ದಿನ  ರಾವಣನ ಬೃಹತ್ ಪ್ರತಿಕೃತಿಗೆ ಬೆಂಕಿ ಹಚ್ಚುವ ಈ ಕಾರ್ಯಕ್ರಮವನ್ನು ನಡೆಸುತ್ತಾರೆ. ಇದು ಭಾರತದಾದ್ಯಂತ ನಡೆಯುವ  ಅತಿದೊಡ್ಡ ಉತ್ಸವವಾಗಿದೆ. ಕಾರ್ಯಕ್ರಮವಾಗಿರುತ್ತದೆ ಎನ್ನಲಾಗಿದೆ.