Sunday, 8th September 2024

ತಾಪಮಾನ ಏರಿಕೆ, ಬಿಸಿಗಾಳಿ: ಪಶ್ಚಿಮ ಬಂಗಾಳದ ಶಿಕ್ಷಣ ಸಂಸ್ಥೆಗಳ ಮುಚ್ಚುಗಡೆ

ಕೋಲ್ಕತ್ತ/ ಪಟ್ನಾ: ತಾಪಮಾನ ಮತ್ತು ಬಿಸಿಗಾಳಿಯ ವಾತಾವರಣ ಇರುವುದರಿಂದ ಪಶ್ಚಿಮ ಬಂಗಾಳದ ಶಿಕ್ಷಣ ಸಂಸ್ಥೆಗಳನ್ನು ಸೋಮವಾರದಿಂದ ಶನಿವಾರದವರೆಗೆ ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಶಾಲೆಗೆ ತೆರಳುತ್ತಿರುವ ಮಕ್ಕಳಲ್ಲಿ ತಲೆನೋವು ಮತ್ತು ಇತರ ಆರೋಗ್ಯ ಸಮಸ್ಯೆಗಳು ಕಂಡು ಬಂದಿವೆ ಎಂದೂ ಹೇಳಿದ್ದಾರೆ. ‘ಖಾಸಗಿ ಶಾಲೆಗಳಿಗೂ ಈ ಅವಧಿಯಲ್ಲಿ ರಜೆ ನೀಡಬೇಕು’ ಎಂದೂ ಒತ್ತಾಯಿಸಿದ್ದಾರೆ.

ಬಿಹಾರದಲ್ಲಿ ಮುಂದಿನ ನಾಲ್ಕು ದಿನ ತೀವ್ರ ಬಿಸಿಗಾಳಿಯ ವಾತಾವರಣ ಇರಲಿದೆ ಎಂದು ರಾಜ್ಯ ಸರ್ಕಾರದ ಹವಾಮಾನ ವರದಿ ತಿಳಿಸಿದೆ.

ರಾಜ್ಯದ ನಾಲ್ಕು ಸ್ಥಳಗಳಲ್ಲಿ 42 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ. ಔರಂಗಾಬಾದ್‌ ಜಿಲ್ಲೆಯಲ್ಲಿ ಶನಿವಾರ ದಾಖಲೆಯ 43 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿತ್ತು ಎಂದೂ ತಿಳಿಸಿದೆ.

error: Content is protected !!