ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಾದ್ಯಂತ ಶನಿವಾರ ಹಿಮ ಹಾಗೂ ಭಾರಿ ಮಳೆ ಆಗುತ್ತಿರುವ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿದೆ.
ಕಾಶ್ಮೀರ ಕಣಿವೆಯು ದೇಶದ ಸಂಪರ್ಕವನ್ನು ಕಡಿದುಕೊಂಡಿದೆ. ಹೆಚ್ಚಿನ ಪ್ರಮಾಣದ ಹಿಮ ಸುರಿಯುತ್ತಿರುವುದರಿಂದ ಹಾಗೂ ಹೆದ್ದಾರಿಯ ಅಲ್ಲಲ್ಲಿ ಭೂ ಕುಸಿತ ಉಂಟಾಗಿ ಕಣಿವೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ 264 ಕಿ.ಮೀ ಉದ್ದದ ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯ ಸಂಚಾರ ಬಂದ್ ಆಗಿದ್ದು, ವಾಯು ಸಂಚಾರ ಸ್ಥಗಿತಗೊಂಡಿದೆ.
ಕಾಶ್ಮೀರದ ಅನೇಕ ಭಾಗಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸ ಲಾಗಿದೆ. ಬನಿಯಾಲ್-ಬಾರಾಮುಲ್ಲ ವಿಭಾಗದಲ್ಲಿ ರೈಲು ಮಾರ್ಗವನ್ನು ಬಂದ್ ಮಾಡಲಾಗಿದೆ.
ಶನಿವಾರ ಮಧ್ಯಾಹ್ನದವರೆಗೆ ಎಲ್ಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಯಿತು’ ಎಂದು ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದರು.
ಸೀತಾ ರಾಮ್ ಪಾಸ್ಸಿ ಬಳಿ ಸಿಲುಕಿಕೊಂಡಿದ್ದ ಗುಜರಾತ್ 26 ಮಂದಿ ಸೇರಿ 86 ಪ್ರಯಾಣಿಕರನ್ನು ಶುಕ್ರವಾರ ಮಧ್ಯರಾತ್ರಿ ಪೊಲೀಸರು ರಕ್ಷಿಸಿದ್ದು, ರಾಂಬಾನ್ ಜಿಲ್ಲೆಯ ವಿವಿಧ ಸಮುದಾಯ ಕೇಂದ್ರ ಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಇಂಧನ ಮತ್ತು ತರಕಾರಿಗಳು ಸೇರಿದಂತೆ ಅಗತ್ಯ ವಸ್ತುಗಳ ಸಾಗಣೆಯ 300 ಟ್ರಕ್‌ಗಳಿಗೆ ಅವಕಾಶ ಕಲ್ಪಿಸಿ ಸಾಗಣೆಗೆ ಅನುಕೂಲ ಮಾಡಿಕೊಡಲಾಯಿತು’ ಎಂದು ರಾಂಬಾನ್ ಎಸ್‌ಎಸ್‌ಪಿ ಶಬಿರ್ ತಿಳಿಸಿದರು.
ವೈಷ್ಣೋದೇವಿ ದೇಗುಲದಲ್ಲಿ ಸುಮಾರು ನಾಲ್ಕು ಇಂಚುಗಳಷ್ಟು ಹಿಮ ಬಿದ್ದಿದೆ ಎಂದು ಹೇಳಿದರು. ಜ.9ರ ನಂತರ ಹವಾಮಾನದಲ್ಲಿ ಸುಧಾರಣೆ ಕಾಣಬಹು ದಾಗಿದ್ದು, ಭೂಕುಸಿತ ಹಾಗೂ ಹಿಮಕುಸಿತದ ಸಂಭವನೀಯ ಪ್ರದೇಶಗಳತ್ತ ಜನರು ಹೋಗಬಾರದು ಎಂದು ಮನವಿ ಮಾಡಿದೆ.