Friday, 22nd November 2024

ಭಾರಿ ಮಳೆ: ಸತ್ತಾರಿ, ಬಿಚೊಲಿಂ ತಹಸೀಲ್‌, ದರ್ಭಾಂದೋರಾ ಜಲಾವೃತ

ಪಣಜಿ: ಭಾರಿ ಮಳೆಯಿಂದಾಗಿ ನದಿಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಉತ್ತರ ಗೋವಾದ ಸತ್ತಾರಿ ಮತ್ತು ಬಿಚೊಲಿಂ ತಹಸೀಲ್‌ ಮತ್ತು ದಕ್ಷಿಣ ಗೋವಾದ ದರ್ಭಾಂದೋರಾ ಸೇರಿದಂತೆ ವಿವಿಧ ಭಾಗಗಳಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗಿದೆ.

ಮಹದಾಯಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದ್ದು, ಸತ್ತಾರಿ ತಹಸೀಲ್‌ನಲ್ಲಿ ಗುರು ವಾರ ರಾತ್ರಿಯಿಂದ ನೂರಕ್ಕೂ ಹೆಚ್ಚು ಮನೆಗಳಲ್ಲಿ ನೀರು ತುಂಬಿಕೊಂಡಿದೆ ಎಂದು ವರದಿ ಯಾಗಿದೆ.

ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿದ ವರದಿಯಾಗಿಲ್ಲ. ಆದರೆ, ಪರಿಸ್ಥಿತಿ ಗಮನಿಸಿದರೆ, ಪ್ರವಾಹ ಉಂಟಾಗುವ ಸಾಧ್ಯತೆ ಹೆಚಾಗಿದೆ. ಜಲಾವೃತಗೊಂಡಿರುವ ಮನೆಗಳಲ್ಲಿದ್ದ ಜನರನ್ನು ಸುರಕ್ಷಿತ ಜಾಗಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ‘ಸತ್ತಾರಿ ತಹಸೀಲ್‌ನ ವಲೊಪಿ ಪಟ್ಟಣದ ವೆಲುಸ್ ಹಳ್ಳಿಯ ಅರ್ಧ ಭಾಗ ನೀರಿನಲ್ಲಿ ಮುಳುಗಿದೆ.

ಸುತ್ತಮುತ್ತಲಿನ ಹಳ್ಳಿಗಳ ನಡುವಿನ ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಸೇತುವೆಗಳು ಮುಳುಗಿ ಹೋಗಿವೆ’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.