ಮುಂಬೈ: ಮಹಾರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಬುಧವಾರ ಧಾರಾಕಾರ ಮಳೆಯಾಗುತ್ತಿದೆ.
ವಾಹನಗಳು ಅರ್ಧ ಮಟ್ಟದವರೆಗೆ ನೀರಿನಲ್ಲಿ ಮುಳುಗಿ ಹೋಗುತ್ತಿವೆ. ರೈಲ್ವೆ ಹಳಿಗಳು ನೀರಿನಲ್ಲಿ ಮುಳುಗಿಹೋಗಿದೆ. ಸಿಯೊನ್ ರೈಲ್ವೆ ನಿಲ್ದಾಣ ಮತ್ತು ಜಿಟಿಬಿ ನಗರ ರೈಲ್ವೆ ನಿಲ್ದಾಣದ ಮಧ್ಯೆ ರೈಲ್ವೆ ಹಳಿಗಳು ಮುಳುಗಿಹೋಗಿವೆ.
ಮುಂಬೈಯ ಕುರ್ಲಾ ಮತ್ತು ಸಿಎಸ್ ಎಂಟಿ ಮಧ್ಯೆ ಸ್ಥಳೀಯ ರೈಲು ಸೇವೆಗಳನ್ನು ಧಾರಾಕಾರ ಮಳೆಯಿಂದಾಗಿ ಸ್ಥಗಿತಗೊಳಿಸ ಲಾಗಿದೆ. ನೀರು ಕಡಿಮೆಯಾದ ನಂತರ ರೈಲು ಸಂಚಾರ ಪುನಾರಂಭವಾಗಲಿದೆ. ಧಾರಾಕಾರ ಮಳೆಯಿಂದಾಗಿ, ಮುಂಬೈಯ ಕಿಂಗ್ಸ್ ಸರ್ಕಲ್ ನಲ್ಲಿ ಹಲವು ಕಡೆ ವಾಹನಗಳು ಮುಳುಗಿದ್ದು ಪ್ರಯಾಣಿಕರಿಗೆ ತೀವ್ರ ಅಡಚಣೆಯುಂಟಾಗಿದೆ.
ಚುನಭಟ್ಟಿ ರೈಲ್ವೆ ನಿಲ್ದಾಣದ ಬಳಿ ಭಾರಿ ಮಳೆ ಮತ್ತು ನೀರು ಹರಿಯುವುದರಿಂದ, ಹಾರ್ಬರ್ ಮಾರ್ಗದಲ್ಲಿ ರೈಲು ಸೇವೆಗಳನ್ನು ಬಿ / ಡಬ್ಲ್ಯೂ ಸಿಎಸ್‌ಎಂಟಿ- ವಾಶಿ ಸ್ಥಗಿತಗೊಳಿಸಲಾಗಿದೆ. ಸಿಯಾನ್-ಕುರ್ಲಾ ವಿಭಾಗದಲ್ಲಿ ನೀರು ಹರಿಯುವುದರಿಂದ ಮುಖ್ಯ ಮಾರ್ಗದಲ್ಲಿ, ಸಿಎಸ್‌ಎಂಟಿ- ಥಾಣೆಯಿಂದ ಸೇವೆಗಳನ್ನು ಸ್ಥಗಿತಗೊಳಿಸ ಲಾಗಿದೆ.