ಹೈದರಾಬಾದ್: ತೆಲಂಗಾಣದ ಹಲವು ಜಿಲ್ಲೆಗಳಲ್ಲಿ ಮಂಗಳವಾರವೂ ಭಾರಿ ಮಳೆ ಮುಂದುವರಿದಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡು, ಹಲವೆಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ.
ವಾರಂಗಲ್ ಗ್ರಾಮಾಂತರ ಜಿಲ್ಲೆಯ ನಾಡಿಕುಡದಲ್ಲಿ 38.8 ಸೆಂ.ಮೀ ಮಳೆಯಾಗಿ, ಕರೀಂನಗರ, ಜಯ ಶಂಕರ್ ಭೂಪಾಲ ಪಲ್ಲೆ, ವಾರಂಗಲ್ ನಗರ, ರಾಜಣ್ಣ, ಸಿರ್ಸಿಲ್ಲಾ, ಭದ್ರಾದ್ರಿ-ಕೊತ್ತಗುಡೆಂ ಮುಂತಾದ ಕಡೆಗಳಲ್ಲಿ ಭಾರೀ ಮಳೆ ಸುರಿದಿದೆ.
ಭಾರೀ ಮಳೆಯಿಂದಾಗಿ, ಈ ಭಾಗದ ಜಿಲ್ಲೆಗಳಲ್ಲಿನ ನದಿಗಳು ಮತ್ತು ಇತರ ಜಲಮೂಲಗಳು ತುಂಬಿವೆ. ಬುಧವಾರವು ಭಾರಿ ಮಳೆ ಮುಂದುವರಿಯುವ ಸಾಧ್ಯೆತೆ ಇದೆ ಎಂದು ಮುನ್ಸೂಚನೆ ಇದೆ.
ನವದೆಹಲಿಗೆ ಭೇಟಿ ನೀಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಅವರೊಂದಿಗೆ ಮಾತು ಕತೆ ನಡೆಸಿ, ಜಿಲ್ಲಾಧಿಕಾರಿಗಳೂ ಸೇರಿದಂತೆ ರಾಜ್ಯದ ಎಲ್ಲ ಆಡಳಿತ ವ್ಯವಸ್ಥೆ ಎಚ್ಚರವಾಗಿದ್ದು ಕಾರ್ಯ ನಿರ್ವಹಿಸುವಂತೆ ಸೂಚಿಸಿದ್ದಾರೆ.