Wednesday, 11th December 2024

ಧಾರಾಕಾರ ಮಳೆ: ಸಿಡಿಲು ಬಡಿದು 20 ಮಂದಿ ಸಾವು

ಕೋಲ್ಕತ್ತ: ಸೋಮವಾರ ಒಂದೇ ದಿನ ಸಿಡಿಲು ಬಡಿದು 20 ಮಂದಿ ಸತ್ತಿದ್ದಾರೆ. ಪಶ್ಚಿಮ ಬಂಗಳಾದಲ್ಲಿ ಘಟನೆ ಸಂಭವಿಸಿದೆ.

ಪಶ್ಚಿಮ ಬಂಗಾಳ ದ ಮುರ್ಷಿದಾಬಾದ್​, ಹೂಗ್ಲಿ, ಪುರ್ಬಾ ಮೆದಿನಿಪುರ ಸೇರಿ ಮೂರು ಜಿಲ್ಲೆಗಳಲ್ಲಿ ಸೋಮವಾರ ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ. ಮುರ್ಷಿದಾಬಾದ್​ ಮತ್ತು ಹೂಗ್ಲಿ ಜಿಲ್ಲೆಗಳಲ್ಲಿ ತಲಾ 9 ಜನರು ಸಿಡಿಲಿಗೆ ಬಲಿಯಾ ದರೆ, ಪುರ್ಬಾ ಮೆದಿನಿಪುರ ಜಿಲ್ಲೆಯಲ್ಲಿ ಇಬ್ಬರು ಸತ್ತಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಅಧಿಕಾರಿಗಳು ಮಾಹಿತಿ ನೀಡಿ ದ್ದಾರೆ. ಮುರ್ಷಿದಾಬಾದ್​ನಲ್ಲಿ ಮೂವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಿಡಿಲು ಬಡಿದು ಮೃತಪಟ್ಟವರ ಕುಟಂಬಸ್ಥರಿಗೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ, ಗಾಯಗೊಂಡವರಿಗೆ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದೆ.