Friday, 22nd November 2024

Heavy Rain: ಮುಂಬೈ ಸೇರಿದಂತೆ ಮಹಾರಾಷ್ಟ್ರದೆಲ್ಲೆಡೆ ಭಾರೀ ಮಳೆ; ರೈಲು, ವಿಮಾನ ಸಂಚಾರ ರದ್ದು

heavy rain

ಮುಂಬೈ: ಮುಂಬೈ, ಪಾಲ್ಘರ್ ಮತ್ತು ಸತಾರಾ ಸೇರಿದಂತೆ ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಬುಧವಾರ ಸಂಜೆ ತೀವ್ರ ಗುಡುಗು, ಮಿಂಚು ಮತ್ತು ಭಾರೀ ಮಳೆ(Heavy Rain)ಯಾಗಿದೆ. ಮುಂದಿನ ಕೆಲವು ಗಂಟೆಗಳಲ್ಲಿ 40-50 ಕಿಮೀ ವೇಗದಲ್ಲಿ ಬೀಸುವ ಗಾಳಿಯು ಹಲವು ಪ್ರದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

IMD ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಿಂದಾಗಿ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿವೆ. ಪ್ರತಿಕೂಲ ಹವಾಮಾನದಿಂದಾಗಿ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕಾರ್ಯಾಚರಣೆ ಈಗಾಗಲೇ ಸ್ಥಗಿತಗೊಂಡಿದೆ. ಇದಕ್ಕೂ ಮುನ್ನ ಇಂಡಿಗೋ ವಿಮಾನವು ಗಾಳಿಯ ಹೊಡೆತದಿಂದಾಗಿ ಲ್ಯಾಂಡಿಂಗ್ ಅನ್ನು ಸ್ಥಗಿತಗೊಳಿಸಿ ಅಹಮದಾಬಾದ್‌ಗೆ ಡೈವರ್ಟ್‌ ಮಾಡಲಾಗಿದೆ.

ಮುಂಬೈನ ಉಪನಗರ ರೈಲು ಜಾಲವೂ ಧಾರಾಕಾರ ಮಳೆಯಿಂದ ಹೆಚ್ಚು ಪರಿಣಾಮ ಬೀರಿದೆ. ಕುರ್ಲಾ, ಭಾಂಡಪ್ ಮತ್ತು ವಿಖ್ರೋಲಿಯಲ್ಲಿ ರೈಲು ಹಳಿಗಳು ಜಲಾವೃತಗೊಂಡಿವೆ. ಕೇಂದ್ರ ರೈಲ್ವೇ (ಸಿಆರ್) ಮಾರ್ಗದಲ್ಲಿ ಒಂದು ಗಂಟೆಯವರೆಗೆ ವಿಳಂಬವಾಗಿದೆ. ನಹೂರ್, ಕಂಜುರ್ಮಾರ್ಗ್ ಮತ್ತು ವಿದ್ಯಾವಿಹಾರ್ ನಿಲ್ದಾಣಗಳಲ್ಲಿ ರೈಲುಗಳು ನಿಲುಗಡೆಯಾಗುವುದಿಲ್ಲ ಎಂದು ನಿಲ್ದಾಣಗಳಲ್ಲಿನ ಪ್ರಕಟಣೆಗಳು ಪ್ರಯಾಣಿಕರಿಗೆ ತಿಳಿಸಿದೆ.

ಪಶ್ಚಿಮ ಮಾರ್ಗದಲ್ಲಿ ರೈಲು ರದ್ದತಿ ಆರಂಭವಾಗಿದ್ದು, ಚರ್ಚ್‌ಗೇಟ್ ಮತ್ತು ಇತರ ನಿಲ್ದಾಣಗಳಲ್ಲಿ ಭಾರೀ ಜನಸಂದಣಿ ಉಂಟಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನು ನಿಭಾಯಿಸಲು ನಗರದ ಸಾರಿಗೆ ವ್ಯವಸ್ಥೆಯು ಹರಸಾಹಸ ಪಡುತ್ತಿರುವ ಕಾರಣ ಪ್ರಯಾಣಿಕರು ದೀರ್ಘ ವಿಳಂಬವನ್ನು ಎದುರಿಸುತ್ತಿದ್ದಾರೆ.

ಮುಂಬೈ ಮತ್ತು ನೆರೆಯ ಪ್ರದೇಶಗಳಿಗೆ IMD ಮುನ್ಸೂಚನೆ

ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಳೆಯ ಪ್ರಮಾಣ ಮತ್ತು ಗುಡುಗು ಸಹಿತ ಚಂಡಮಾರುತ ಮತ್ತಷ್ಟು ಹೆಚ್ಚಾಗುವ ಬಗ್ಗೆ IMD ಎಚ್ಚರಿಕೆ ನೀಡಿದೆ.

ಈ ಸುದ್ದಿಯನ್ನೂ ಓದಿ: Vijayapura Rain: ವಿಜಯಪುರದಲ್ಲಿ ಇಡೀ ರಾತ್ರಿ ಮಳೆ ಅಬ್ಬರ