Sunday, 15th December 2024

ಹಲವು ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನ ಮಳೆ

ವದೆಹಲಿ: ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಇಂದಿನಿಂದ ಮೂರು ದಿನ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಭಾರತೀಯ ಹವಾಮಾನ ಇಲಾಖೆ ರೆಡ್‌, ಯೆಲ್ಲೋ ಅಲರ್ಟ್‌ ಘೋಷಣೆ ನೀಡಿದೆ.

ಕರ್ನಾಟಕದಲ್ಲಿ ಜೂ.27ರವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದ್ದು, ಜೂ.27 ರವರೆಗೆ ಸೌರಾಷ್ಟ್ರ ಮತ್ತು ಕಚ್ನಲ್ಲಿ ಪ್ರತ್ಯೇಕ ವಾಗಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಜೂ.29 ರವರೆಗೆ ಗುಜರಾತ್ ಪ್ರದೇಶ ಮತ್ತು ಕರಾವಳಿ ಕರ್ನಾಟಕದಲ್ಲಿ ಜೂನ್ 27ರವರೆಗೆ ತಮಿಳುನಾಡು; ಜೂ.27ರಂದು ಉತ್ತರ ಒಳನಾಡು; ಜೂ.27 ಮತ್ತು 28 ರಂದು ತೆಲಂಗಾಣ ಮತ್ತು ಜೂ.25 ರಿಂದ ಜೂ.28 ರವರೆಗೆ ಆಂಧ್ರಪ್ರದೇಶದ ಕರಾವಳಿಯಲ್ಲಿ ಮಳೆಯಾಗಲಿದೆ ಎಂದು ತಿಳಿಸಿದೆ.